ಸಮಗ್ರ ನ್ಯೂಸ್ : ಇನ್ನೂ ಮುಂದೆ ಕಾರು ಹೊಂದಿದವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಆನಂದಪುರಂನ ಮುರುಘಾ ಮಠದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈಗ 50 ಸಾವಿರ ಹಾಗೂ 1 ಲಕ್ಷಕ್ಕೂ ಹಳೆ ಕಾರುಗಳು ಸಿಗುತ್ತಿವೆ.
ಗಾರೆ ಮಾಡುವವರು, ಮೀನು ಹಿಡಿಯುವವರೂ ಕಾರು ತೆಗೆದುಕೊಂಡು ಹೋಗುತ್ತಾರೆ. ಅಂತವರ ಕಾರ್ಡ್ ಸಹಿತ ರದ್ದಾಗಿರುವುದು ಸರಿಯಲ್ಲ ಎಂದರು.
ಈ ವಿಷಯದ ಕುರಿತು ಶಾಸಕ ಎಚ್.ಹಾಲಪ್ಪ ಹರತಾಳು ಹಾಗೂ ನಾನು ಮುಖ್ಯಮಂತ್ರಿ ಬಳಿ ಚರ್ಚಿಸಿದ್ದೇವೆ.
ಈ ಕಾನೂನಿನಿಂದ ಬಡವರು ಹೊಂದಿರುವ ಕಾರ್ಡ್ ರದ್ದಾಗುತ್ತದೆ. ಅವರ ಜೀವನಾಧಾರಕ್ಕೆ ತೊಂದರೆ ಆಗುತ್ತದೆ ಎಂದು ಮನವರಿಕೆ ಮಾಡಿದ್ದೇವೆ. ಬಡವರ ಮೇಲೆ ಕರುಣೆ ತೋರಿ ಸಿಎಂ ಆದೇಶ ಹೊರಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.