ಬೆಂಗಳೂರು : ಪೋಷಕರ ಜೊತೆ ಕೋಪಕೊಂಡು 5ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಾಲಕಿಯ ತಂದೆ, ಪೇಂಟಿಂಗ್ ಕೆಲಸ ಮಾಡುತ್ತಿದ್ದು, ತಾಯಿ, ಗೃಹಿಣಿ. ದಂಪತಿಗೆ ಮೂವರು ಮಕ್ಕಳಿದ್ದು, ಮೃತ ವಿದ್ಯಾರ್ಥಿನಿಯೇ ಹಿರಿಯವಳು.
‘ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ, ವಿದ್ಯಾಭ್ಯಾಸದಲ್ಲಿ ಚುರುಕಿದ್ದಳು. ಶಾಲೆಯಲ್ಲಿ ಶನಿವಾರ ಪೋಷಕರ ಸಭೆ ಇತ್ತು. ಮಗಳ ಜೊತೆ ತಂದೆ ಸಭೆಗೆ ಹೋಗಿ ವಾಪಸು ಮನೆಗೆ ಬಂದಿದ್ದರು. ಊರ ಹಬ್ಬದ ನಿಮಿತ್ತ ಮಗಳಿಗೆ ಹೊಸ ಬಟ್ಟೆ ಕೊಡಿಸಿದ್ದರು. ಆಕೆಯನ್ನು ಮನೆಯಲ್ಲೇ ಬಿಟ್ಟು ಉಳಿದ ಇಬ್ಬರು ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಲೆಂದು ತಂದೆ ಮಾರುಕಟ್ಟೆಗೆ ಹೊರಡಲು ಸಜ್ಜಾಗಿದ್ದರು’ ಎನ್ನಲಾಗಿದೆ.
‘ತಾನೂ ಶಾಪಿಂಗ್ಗೆ ಬರುವುದಾಗಿ ಮಗಳು ಹಠ ಹಿಡಿದಿದ್ದಳು. ಆಕೆಯನ್ನು ಮನೆಯಲ್ಲೇ ಇರುವಂತೆ ಹೇಳಿ ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳ ಜೊತೆ ತಂದೆ ಮಾರುಕಟ್ಟೆಗೆ ಹೋಗಿದ್ದರು.
ಶಾಪಿಂಗ್ಗೆ ಕರೆದುಕೊಂಡು ಹೋಗಲಿಲ್ಲವೆಂದು ನೊಂದ ಬಾಲಕಿ, ಮನೆ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಾಪಿಂಗ್ ಮುಗಿಸಿಕೊಂಡು ತಾಯಿ ಮನೆಗೆ ವಾಪಸು ಬಂದಾಗಲೇ ವಿಷಯ ಗೊತ್ತಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.