ಸುಳ್ಯ: ಹಟ ಮಾಡುತ್ತಿದ್ದ ಮಗುವಿಗೆ ಬರೆ ಹಾಕಿದ ಪಾಪಿ ತಾಯಿ

ಸಮಗ್ರ ನ್ಯೂಸ್: ಹಟ ಮಾಡುತ್ತಿದ್ದ ಮಗುವಿಗೆ ತಾಯಿಯೇ ಸಟ್ಟುಗ ಕಾಯಿಸಿ ಬರೆ ಹಾಕಿದ ಕ್ರೂರ ಘಟನೆ ಸುಳ್ಯ ನಗರದ ನಾವೂರಿನಿಂದ ವರದಿಯಾಗಿದೆ.

Ad Widget ... ..

ಕೆಲದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಸುಳ್ಯ ಸಿ.ಡಿ.ಪಿ.ಒ. ರಶ್ಮಿ ನೆಕ್ರಾಜೆಯವರು ಆ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Ad Widget

ಪರಿಶೀಲನೆ ನಡೆಸಿದ ವೇಳೆ ಮಗುವಿನ ಮೈತುಂಬಾ ಗಾಯಗಳಾಗಿತ್ತು ಎಂದು ಸಿಡಿಪಿಒ ರಶ್ಮಿಯವರು ತಿಳಿಸಿದ್ದಾರೆ. ಸದ್ಯ ಮಗುವನ್ನು ಸಿ.ಡಿ.ಪಿ.ಒ. ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮಗು ಚೇತರಿಸಿಕೊಳ್ಳುತ್ತಿದೆ. ಘಟನೆ ಕುರಿತಂತೆ ಸುಳ್ಯ ಠಾಣೆಗೆ ಮಾಹಿತಿ ನೀಡಲಾಗಿದೆ.

Leave a Comment

Your email address will not be published. Required fields are marked *