ಮಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ತೆರಳುತ್ತಿದ್ದ ಬಸ್ ಪಲ್ಟಿ

ಸಮಗ್ರ ನ್ಯೂಸ್: ಮಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ತೆರಳುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಮೂಡಬಿದಿರೆಯ ಬನ್ನಡ್ಕದ ಎಸ್ ಕೆಎಫ್ ಬಳಿಯಲ್ಲಿ ನಡೆದಿದೆ.

Ad Widget ... ..

ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಕೆಕೆಬಿ ಹೆಸರಿನ ಬಸ್ ಮಗುಚಿ ಬಿದ್ದ ಬಸ್ ಆಗಿದ್ದು, ಚಾಲಕ ಹಾಗೂ ಓರ್ವ ಮಹಿಳಾ ಪ್ರಯಾಣಿಕಳಿಕೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

Ad Widget

ಬನ್ನಡ್ಕದ ಎಸ್ ಕೆ ಎಫ್ ಬಳಿ ಎದುರಿನಿಂದ ಬರುತ್ತಿದ್ದ ಆಟೋಗೆ ದಾರಿ ಕೊಡುವ ವೇಳೆ ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಮಗುಚಿ ಬಿದ್ದ ಪರಿಣಾಮ ಈ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

1 thought on “ಮಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ತೆರಳುತ್ತಿದ್ದ ಬಸ್ ಪಲ್ಟಿ”

  1. ಮಂಗಳೂರಿನಿಂದ ಕೊಟ್ಟಿಗೆಹರಕ್ಕೆ ಕೆಕೆಬಿ ಬಸ್ ವ್ಯವಸ್ಥೆ ಇಲ್ಲ.. ಅದು ಶಿಮೊಗ್ಗ ಮಂಗಳೂರು ಅಥವಾ ಬಾಳೆಹೊನ್ನೂರು ಮಂಗಳೂರು ಇರುತ್ತದೆ..

Leave a Comment

Your email address will not be published. Required fields are marked *