ಕಡಬ: ರಾತ್ರೋರಾತ್ರಿ ಮನೆಗೆ ನುಗ್ಗಿದ ನದಿನೀರು; ನಿವಾಸಿಗಳ ಸ್ಥಳಾಂತರ

ಸಮಗ್ರ ನ್ಯೂಸ್: ಎರಡು ದಿನಗಳಿಂದ ಎಡೆಬಿಡದೆ ಆರ್ಭಟಿಸುತ್ತಿರುವ ಮಹಾ ಮಳೆಗೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮ ಕುಬಲಾಡಿ ಎಂಬಲ್ಲಿ ಹಳ್ಳದ ನೀರು ಮನೆಗೆ ನುಗ್ಗಿ ಮನೆ ಜಲಾವೃತವಾದ ಘಟನೆ ವರದಿಯಾಗಿದೆ.

Ad Widget ... ..

ವಿಷಯ ತಿಳಿದ ಕೂಡಲೇ ಸ್ಥಳೀಯಾಡಳಿತದ ಅಧಿಕಾರಿಗಳು ಹಾಗೂ ಎನ್.ಡಿ.ಆರ್.ಎಫ್ ತಂಡದವರು ಮಧ್ಯರಾತ್ರಿಯೇ ಸ್ಥಳಕ್ಕೆ ತೆರಳಿ ಮನೆಯಲ್ಲಿದ್ದ ತನಿಯಪ್ಪ (54), ಭಾಗೀರಥಿ (50), ಚಂದಪ್ಪ (41), ರೇವತಿ (34) ಅರುಣಾ (15)ಅನಿತಾ (9) ಅಂಜಲಿ (6) ಸೇರಿ ಒಟ್ಟು 7 ಜನರನ್ನು ರಕ್ಷಿಸಿದ್ದು ಸದ್ಯ ಅವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

Ad Widget

Leave a Comment

Your email address will not be published. Required fields are marked *