“ಕಾಂಗ್ರೆಸ್ ‌ನ ತಾಯಿ ಬಂಜೆಯಂತೆ!”| ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಡಿಸಿಎಂ ಸವದಿ

ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದ ಕುರಿತಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Ad Widget ... ..

ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕಾಂಗ್ರೆಸ್ಸಿನ ತಾಯಿ ಬಂಜೆ ಆಗಿದ್ದಾಳೆ. ಗರ್ಭಿಣಿಯೂ ಆಗಲ್ಲ, ಕೂಸನ್ನೂ ಹೆರುವುದಿಲ್ಲ ಕಾಂಗ್ರೆಸ್ ಬಗ್ಗೆ ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸುತ್ತಾರೆ ಅಂತಾರೆ. ನಾನು ಈ ಮಾತನ್ನ ಒಪ್ಪಲ್ಲ. ಗರ್ಭಿಣಿ ಆದರೆ ತಾನೇ ಕುಲಾಯಿ ಹೊಲೆಸುವುದು. ಕಾಂಗ್ರೆಸ್​ನಲ್ಲಿ ಕೂಸು ಹುಟ್ಟಲ್ಲ, ಕುಲಾಯಿ ಹೊಲೆಸುವ ಪ್ರಸಂಗವೂ ಬರಲ್ಲ ಲಕ್ಷ್ಮಣ ಸವದಿ ಹೇಳಿದ್ದಾರೆ.

Ad Widget

ಕಾಂಗ್ರೆಸ್ ಮುಳುಗುವ ಹಡಗು. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ರಾಜ್ಯದಲ್ಲಿ ಮುಂದಿನ ಐದು ವರ್ಷ ಬಿಜೆಪಿಯೇ ಆಡಳಿತಕ್ಕೆ ಬರುತ್ತೆ. ಸಿದ್ದರಾಮೋತ್ಸವದಿಂದ ಬಿಜೆಪಿಗೆ ಹುಮ್ಮಸ್ಸು, ಆತ್ಮಸ್ಥೈರ್ಯ ಬಂದಿದೆ. ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಕೊನೆಗಾಲೋತ್ಸವ ಆಗುತ್ತೆ ಎಂದು ಲೇವಡಿ ಮಾಡಿದ್ದಾರೆ.

Leave a Comment

Your email address will not be published. Required fields are marked *