ದೋಣಿಗಲ್ ನಲ್ಲಿ ಭೂಕುಸಿತ| ಶಿರಾಡಿ ಘಾಟ್ ನಲ್ಲಿ ಘನವಾಹನ ಸಂಚಾರ ಬಂದ್

ಸಮಗ್ರ ನ್ಯೂಸ್: ಶಿರಾಡಿ ಘಾಟ್‌ನ ದೋಣಿಗಲ್ ಬಳಿ ಮತ್ತೆ ಭೂಕುಸಿತಗೊಂಡ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Ad Widget ... ..

ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ಕಳೆದ ವರ್ಷ ಹೆದ್ದಾರಿ ಕುಸಿತಗೊಂಡ ಅಲ್ಪ ದೂರದಲ್ಲೇ ವಾರದ ಹಿಂದೆ ರಸ್ತೆ ಕುಸಿದಿದ್ದು, ಇಂದು ಮತ್ತೆ ಭೂ ಕುಸಿತಗೊಂಡು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಲಾರಿ ಸೇರಿದಂತೆ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಲಘು ವಾಹನಗಳನ್ನು ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

Ad Widget

Leave a Comment

Your email address will not be published. Required fields are marked *