ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜುಲೈ 12ರಿಂದ 18, 2026ರ ವರೆಗೆ ಎಲ್ಲಾ ರಾಶಿಗಳ ಆರೋಗ್ಯ, ಆರ್ಥಿಕತೆ, ಪ್ರವಾಸ, ವಿದ್ಯಾಭ್ಯಾಸ, ಸಹವಾಸ ಮತ್ತು ಖರ್ಚು ವೆಚ್ಚಗಳನ್ನು ತಿಳಿದರೆ ಇಡುವ ಹೆಜ್ಜೆ ದೃಢವಾಗಿರಲಿದೆ. ಧೈರ್ಯದಿಂದ ಮುಂದಡಿ ಇಡಲೂ ಸಾಧ್ಯ. ಈ ವಾರದಲ್ಲಿ ಯಾರಿಗೆ ಲಾಭ? ಯಾವ‌ ರಾಶಿಯವರಿಗೆ ಶುಭ? ತಿಳಿಯೋಣ…

Ad Widget ... .. Ad Widget .

ಮೇಷ:
ಈ ವಾರದಲ್ಲಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಕಂಡುಬರಲಿವೆ. ರಾಶ್ಯಾಧಿಪತಿಯ ಬಲವು ಚೆನ್ನಾಗಿದ್ದು, ಹಳೆಯ ಬಾಕಿ ವಸೂಲಾಗಲಿದೆ. ಆದರೆ, ಆತುರದ ನಿರ್ಧಾರಗಳು ಉದ್ಯೋಗದಲ್ಲಿ ಸಣ್ಣಪುಟ್ಟ ಗೊಂದಲಗಳಿಗೆ ಕಾರಣವಾಗಬಹುದು. ವ್ಯಾಪಾರಸ್ಥರಿಗೆ ಮಧ್ಯಮ ಲಾಭ. ವಾರದ ಕೊನೆಯಲ್ಲಿ ಶುಭ ವಾರ್ತೆ ಕೇಳುವಿರಿ.

Ad Widget

ವೃಷಭ:
ಧನಸ್ಥಾನದಲ್ಲಿ ಗ್ರಹಗಳ ಅನುಕೂಲತೆಯಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದರೆ ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುವುದರಿಂದ ಅನವಶ್ಯಕ ಖರ್ಚುಗಳು ಎದುರಾಗಬಹುದು. ಎಂತಹ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸುವ ಸಾಮರ್ಥ್ಯ ನಿಮಗಿದೆ. ಶಿಸ್ತುಬದ್ಧ ಜೀವನಶೈಲಿ ನಿಮ್ಮನ್ನು ಯಶಸ್ಸಿನತ್ತ ಮುನ್ನಡೆಸುತ್ತದೆ. ಶಿವನ ದರ್ಶನ ಪಡೆದು, ಹಿರಿಯರ ಆಶೀರ್ವಾದದೊಂದಿಗೆ ಕೆಲಸ ಆರಂಭಿಸಿದರೆ ನೆಮ್ಮದಿ ಹಾಗೂ ಯಶಸ್ಸು ಸಿಗಲಿದೆ.

ಮಿಥುನ:
ಈ ವಾರ ಮಿಶ್ರಫಲ ಉಂಟಾಗಲಿದೆ. ಹೊಸ ಉದ್ಯೋಗದ ಪ್ರಯತ್ನಗಳಿಗೆ ಸಫಲತೆ ಸಿಗುವ ಸೂಚನೆ ಇದೆ. ಆದರೆ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸುವುದು ಅಗತ್ಯ. ಸೂರ್ಯೋದಯದ ಸಮಯದಲ್ಲಿ ಸೂರ್ಯನಾರಾಯಣನ ಧ್ಯಾನ ಮಾಡುವುದು ಶ್ರೇಯಸ್ಕರ. ದತ್ತಾತ್ರೇಯ ಸ್ವಾಮಿಯ ಪೂಜೆಯು ನಿಮ್ಮ ಮನೋಕಾಮನೆಯನ್ನು ಪೂರೈಸುತ್ತದೆ. ಧನಸಮೃದ್ಧಿ ಹಾಗೂ ಕೀರ್ತಿ ಹೆಚ್ಚಲಿದ್ದು, ಶತ್ರುಗಳ ತಂತ್ರಗಳು ವಿಫಲವಾಗಲಿವೆ.

ಕಟಕ:
ವೃತ್ತಿರಂಗದಲ್ಲಿ ತೃಪ್ತಿಕರ ವಾತಾವರಣ ಇರಲಿದೆ. ನಿಮ್ಮ ಮಾತಿನ ಚಾತುರ್ಯದಿಂದ ಕಠಿಣ ಕೆಲಸಗಳನ್ನೂ ಸುಲಭವಾಗಿ ಮುಗಿಸುವಿರಿ. ಉಷಾಕಾಲದಲ್ಲಿ ಮಹಾಲಕ್ಷ್ಮಿಯ ಧ್ಯಾನ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ. ವಿಶ್ರಾಂತಿಗೆ ಸಮಯ ಕೊಡಿ. ಶಿವಮಂತ್ರ ಜಪಿಸಿ.

ಸಿಂಹ:
ಗ್ರಹಬಲವು ಉತ್ತಮವಾಗಿದ್ದು, ದೀರ್ಘಕಾಲದ ಕನಸು ನನಸಾಗುವ ಸಮಯ. ಗಣೇಶನ ಆರಾಧನೆಯಿಂದ ರಾಜಯೋಗದಂತಹ ಫಲ ಪಡೆಯಬಹುದು. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಹೊಸ ಹೂಡಿಕೆಗೆ ಸೂಕ್ತ ಸಮಯ. ಜಗನ್ನಾಥನ ಸ್ಮರಣೆ ಮಾಡಿ.

ಕನ್ಯಾ:
ಶನಿಯ ಪ್ರಭಾವದಿಂದ ಕೆಲಸಗಳಲ್ಲಿ ಸ್ವಲ್ಪ ವಿಳಂಬ. ಪೂರ್ವ ಜನ್ಮದ ಪುಣ್ಯ ಮತ್ತು ಗುರುಬಲ ನಿಮ್ಮನ್ನು ಕಾಪಾಡುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳಲು ಇದು ಉತ್ತಮ ವಾರ. ಆರೋಗ್ಯದ ಏರುಪೇರಿನ ಬಗ್ಗೆ ಎಚ್ಚರ. ರುದ್ರದೇವರ ಪೂಜೆ ಮತ್ತು ಎಳ್ಳೆಣ್ಣೆ ದೀಪ ಹಚ್ಚುವುದರಿಂದ ಕಷ್ಟಗಳು ದೂರವಾಗುತ್ತವೆ.

ತುಲಾ:
ಬುದ್ಧಿವಂತಿಕೆ ಮತ್ತು ಚಾಣಾಕ್ಷತನವೇ ನಿಮ್ಮ ಬಂಡವಾಳ. ಕಷ್ಟದಲ್ಲಿದ್ದವರಿಗೆ ನೆರವಾಗುವ ನಿಮ್ಮ ಗುಣದಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ. ಈ ವಾರ ಅದೃಷ್ಟ ತರಲಿದೆ. ನಿಮ್ಮ ಸುತ್ತಮುತ್ತಲಿನವರೊಂದಿಗೆ ಸೌಹಾರ್ದದಿಂದ ಇರಿ. ವೆಂಕಟೇಶ್ವರ ಸ್ವಾಮಿಯ ನಿತ್ಯ ಪ್ರಾರ್ಥನೆಯು ಆರ್ಥಿಕ ಸಂಕಷ್ಟಗಳನ್ನು ದೂರ ಮಾಡುತ್ತದೆ. ಹೊಸ ವ್ಯವಹಾರಗಳು ಕೈಗೂಡಲಿವೆ.

ವೃಶ್ಚಿಕ:
ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಗಾಳಿಯಂತೆ ಬೀಸಲಿವೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದೆ. ಶಿಸ್ತು, ನಿಯಮ ಹಾಗೂ ಕಠಿಣ ಪರಿಶ್ರಮದಿಂದ ಗುರಿಯನ್ನು ತಲುಪುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದ್ದು, ಹಳೆಯ ಸಾಲಗಳಿಂದ ಮುಕ್ತಿ ಸಿಗಲಿದೆ. ಸೂರ್ಯನ ಕಿರಣಗಳಂತೆ ನಿಮ್ಮ ಬಾಳು ಬೆಳಗಲಿದ್ದು, ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ.

ಧನಸ್ಸು:
ಗ್ರಹಗಳ ಸಂಚಾರವು ವಿಶೇಷ ಸೂಕ್ತ ಮಾರ್ಗದಲ್ಲಿ ಮುನ್ನಡೆಸಲಿದೆ. ನಿಮ್ಮ ಪೂರ್ವ ಪುಣ್ಯದ ಫಲವಾಗಿ ನಿರೀಕ್ಷಿತ ಲಾಭಗಳು ಕೈಸೇರಲಿವೆ. ವ್ಯವಹಾರದಲ್ಲಿ ಪೈಪೋಟಿ ಇದ್ದರೂ ಜಯ ನಿಮ್ಮದೇ. ‘ಓಂ ಶ್ರೀರಾಮಾಯ ನಮಃ’ ಎಂಬ ಮಂತ್ರದ ನಾಮಸ್ಮರಣೆಯು ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಆಧ್ಯಾತ್ಮಿಕ ಚಿಂತನೆಗಳು ಮಾನಸಿಕ ಶಾಂತಿ ನೀಡುತ್ತವೆ.

ಮಕರ:
ಶನಿ ದೇವನ ಕೃಪೆಯಿಂದ ಧೈರ್ಯ ಮತ್ತು ಸ್ಥಿರತೆ ಹೆಚ್ಚಾಗಲಿದೆ. ತಂದೆ-ತಾಯಿಯರನ್ನು ಗೌರವಿಸಿ, ಗುರುಹಿರಿಯರ ಆಶೀರ್ವಾದ ಪಡೆದರೆ ಆಕಾಶವನ್ನೇ ಮುಟ್ಟುವಂತಹ ಸಾಧನೆ ಮಾಡಬಹುದು. ಜ್ಞಾನ ಮತ್ತು ವಿದ್ಯಾರ್ಜನೆಗೆ ಇದು ಸುವರ್ಣ ಕಾಲ. ಶತ್ರುಗಳು ಮಿತ್ರರಾಗುವರು. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ನಿರಂತರ ಪ್ರಯತ್ನದಿಂದ ಯಶಸ್ಸು ಖಂಡಿತ.

ಕುಂಭ:
ವ್ಯಾಪಾರ ಮತ್ತು ವ್ಯವಹಾರದಲ್ಲಿ ತೀವ್ರ ಒತ್ತಡದ ವಾತಾವರಣ ಇರಬಹುದು. ಹೊಸ ಯೋಜನೆಗಳಲ್ಲಿ ಸದ್ಯಕ್ಕೆ ಹಣ ಹೂಡಿಕೆ ಮಾಡದಿರುವುದು ಉತ್ತಮ. ಎಚ್ಚರ ಮತ್ತು ತಾಳ್ಮೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯ ದಿನಗಳನ್ನು ಕಾಣಬಹುದು. ಸಾಯಂಕಾಲದ ಸಮಯದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ, ಮಾನಸಿಕ ಗೊಂದಲ ನಿವಾರಣೆಯ ದಾರಿ ಸುಲಭವಾಗುತ್ತದೆ.

ಮೀನ:
ಮೀನ ರಾಶಿಯವರಿಗೆ ಗ್ರಹಗಳ ಸ್ಥಿತ್ಯಂತರದಿಂದ ಅಲ್ಪ ಮಟ್ಟಿನ ಆತಂಕ ಉಂಟಾಗಬಹುದು. ಗುರುವು ರಾಶ್ಯಾಧಿಪತಿಯಾಗಿದ್ದು, ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರೆ ಕಷ್ಟಗಳು ತಾವಾಗಿಯೇ ಕರಗುತ್ತವೆ. ಲೋಕೋಪಕಾರವೇ ಮಾನವ ಧರ್ಮ ಎಂಬುದನ್ನು ಮರೆಯಬೇಡಿ. ವಾರದ ಅಂತ್ಯಕ್ಕೆ ನೆಮ್ಮದಿ.

Leave a Comment

Your email address will not be published. Required fields are marked *