ಹಿರಿಯ ಲೇಖಕ ಡಿ.ಎಸ್ ನಾಗಭೂಷಣ ವಿಧಿವಶ

ಸಮಗ್ರ ನ್ಯೂಸ್: ಹಿರಿಯ ಲೇಖಕ, ಸಮಾಜವಾದಿ ಚಿಂತಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್. ನಾಗಭೂಷಣ ಅವರು ಗುರುವಾರ ನಿಧನರಾಗಿದ್ದಾರೆ.

Ad Widget ... ..

ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದ ನಾಗಭೂಷಣ ಅವರಿಗೆ 70 ವರ್ಷ ವಯಸ್ಸಾಗಿತ್ತು.ಮೃತರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನಡೆಯಲಿದೆ. ಅವರಿಗೆ ಪತ್ನಿ, ಕವಯತ್ರಿ ಸವಿತಾ ನಾಗಭೂಷಣ್ ಇದ್ದಾರೆ.

Ad Widget

ನೇರ ನಡೆ, ನುಡಿ, ನಿಷ್ಠುರ ವ್ಯಕ್ತಿ ತತ್ವದ ಡಿಎಸ್ ನಾಗಭೂಷಣ್ ಸಾರ್ವಜನಿಕ ಬದುಕಿನಲ್ಲಿ ತೋರಬೇಕಾದ ಬದ್ದತೆ, ಪ್ರಾಮಾಣಿಕತೆಗೆ ಮಾದರಿಯಾಗಿದ್ದರು. ಸಾಹಿತ್ಯ, ಸಂಸ್ಕೃತಿ, ಕಲೆ, ರಾಜಕೀಯದ ಕುರಿತು ಅಪಾರವಾದ ತಿಳವಳಿಕೆ, ಪಾಂಡಿತ್ಯ ಹೊಂದಿದ್ದ ನಾಗಭೂಷಣ್ ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುತ್ತಿದ್ದ ರೀತಿ ವಿಶಿಷ್ಟವಾಗಿತ್ತು.

Leave a Comment

Your email address will not be published. Required fields are marked *