ದೊಡ್ಡಬಳ್ಳಾಪುರದಿಂದ ರೈಲಿನಲ್ಲಿ ಚಂಢಿಗಡ್ ಗೆ ಹೊರಟ 32 ಬಸ್ ಗಳು

ಸಮಗ್ರ ನ್ಯೂಸ್: ಬೆಂಗಳೂರು ವಿಭಾಗವು ಇದೇ ಮೊದಲ ಬಾರಿಗೆ ಸರಕು ಸಾಗಣೆ ರೈಲಿನಲ್ಲಿ ಬಸ್‌ಗಳನ್ನು ಸಾಗಣೆ ಮಾಡಿದೆ. ಇಲ್ಲಿನ ದೊಡ್ಡಬಳ್ಳಾಪುರದ ಗೂಡ್ಸ್‌ಶೆಡ್‌ನಿಂದ ಬುಧವಾರ ಚಂಡೀಗಢಕ್ಕೆ 32 ಬಸ್‌ಗಳನ್ನು ರೈಲಿನಲ್ಲಿ ಕಳುಹಿಸಿಕೊಡಲಾಯಿತು.

Ad Widget ... ..

2,500 ಕಿ.ಮೀ. ದೂರದಲ್ಲಿರುವ ಚಂಡೀಗಢಕ್ಕೆ 5ರಿಂದ 6 ದಿನಗಳಲ್ಲಿ ಈ ಬಸ್‌ಗಳು ರೈಲಿನ ಮೂಲಕ ತಲುಪಲಿವೆ. ಈ ಹಿಂದೆ ಪ್ಯಾಸೆಂಜರ್‌ ಬಸ್‌ಗಳನ್ನು ದೊಡ್ಡ ದೊಡ್ಡ ಟ್ರಕ್‌ಗಳ ಮೂಲಕ ಸಾಗಣೆ ಮಾಡಲಾಗುತ್ತಿತ್ತು. ಇದರಿಂದ ಸಮಯದ ಜತೆಗೆ ಭಾರಿ ಪ್ರಮಾಣದ ಡೀಸೆಲ್‌ ಖರ್ಚಾಗುತ್ತಿತ್ತು. ವಾಯುಮಾಲಿನ್ಯ ಮತ್ತು ಸಂಚಾರದಟ್ಟಣೆ ಹೆಚ್ಚಿತ್ತು.

Ad Widget

ವಿವಿಧ ಹಂತಗಳಲ್ಲಿ 64 ಬಸ್‌ ರವಾನೆ 32 ರ್ಯಾಕ್‌ಗಳಲ್ಲಿ ಮೊದಲ ಹಂತದಲ್ಲಿ ಬಿಎಸ್‌-6 ಮಾದರಿಯ 32 ಪ್ರಯಾಣಿಕರ ಬಸ್‌ಗಳನ್ನು ಚಂಡೀಗಢಕ್ಕೆ ರೈಲಿನಲ್ಲಿ ಸಾಗಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ 64 ಬಸ್‌ಗಳನ್ನು ವಿವಿಧ ಹಂತಗಳಲ್ಲಿ ರೈಲಿನಲ್ಲೇ ಸಾಗಿಸಲು ಉದ್ದೇಶಿಸಲಾಗಿದೆ.

Leave a Comment

Your email address will not be published. Required fields are marked *