ಸಮಗ್ರ ನ್ಯೂಸ್: ರಾಜ್ಯದಾದ್ಯಂತ ನಾಳೆಯಿಂದ ಮೇ 19 ರವರೆಗೆ ಮದ್ಯ ಮಾರಾಟಗಾರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಕುರಿತು ಉಡುಪಿಯಲ್ಲಿ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಮಾಹಿತಿ ನೀಡಿದ್ದು, ಪ್ರತಿಭಟನೆ ಘೋಷಿಸಿದ್ದಾರೆ.
ಕೆಎಸ್ ಪಿಸಿಎಲ್ ಎಂಡಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಒಂದು ದಿನ ಮದ್ಯ ಖರೀದಿ ಮಾಡದಿದ್ದರೆ ರಾಜ್ಯದಲ್ಲಿ 70 ಕೋಟಿ ರೂಪಾಯಿ ನಷ್ಟವಾಗುತ್ತದೆ. ಈ ಕಾರಣದಿಂದಾಗಿ ವಿಭಾಗಮಟ್ಟದಲ್ಲಿ ಮದ್ಯ ಖರೀದಿ ನಿಲ್ಲಿಸಲು ನಿರ್ಧಾರವನ್ನು ಮಾಡಲಾಗಿದೆ. ಇದರ ಜೊತೆಗೆ ಕಲಬುರಗಿ ವಿಭಾಗದಲ್ಲಿಯೂ ಮದ್ಯ ವ್ಯಾಪಾರಿಗಳಿಂದ ಮುಷ್ಕರ ನಡೆಸಲಾಗಿದೆ. ಜೊತೆಗೆ ಹೊಸಪೇಟೆ, ಬೆಳಗಾವಿ, ಮೈಸೂರು, ಮಂಗಳೂರು ವಿಭಾಗದಲ್ಲಿಯೂ ಮದ್ಯ ಮಾರಾಟ ಇರುವುದಿಲ್ಲ.
ಮೇ 6 ರಿಂದ ಗುಲ್ಬರ್ಗ ವಿಭಾಗದ ಜಿಲ್ಲೆಗಳಲ್ಲಿಯೂ ಅಂದರೆ ಬೀದರ್, ರಾಯಚೂರು, ಯಾದಗಿರಿಯಲ್ಲೂ ಮುಷ್ಕರ ನಡೆಯಲಿದೆ. ಮೇ 10 ರಂದು ಹೊಸಪೇಟೆ ವಿಭಾಗದ ಜಿಲ್ಲೆಗಳಲ್ಲಿಯೂ ಮುಷ್ಕರ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.







