ಐಸಿಸಿ ರ‍್ಯಾಂಕಿಂಗ್ ಪ್ರಕಟ| ಟಿ-20ಯಲ್ಲಿ ಭಾರತಕ್ಕೆ ಮೊದಲ ಸ್ಥಾನ

ಸಮಗ್ರ ನ್ಯೂಸ್: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2021-22 ರ ಋತುವಿನಲ್ಲಿ ತವರಿನಲ್ಲಿ ಪ್ರಭಾವಶಾಲಿ ಪ್ರದರ್ಶನಗಳ ನಂತರ ಬುಧವಾರ ಐಸಿಸಿ ಬಿಡುಗಡೆ ಮಾಡಿದ ವಾರ್ಷಿಕ ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಟಿ-20 ತಂಡವಾಗಿ ಹೊರ ಹೊಮ್ಮಿದೆ.

Ad Widget ... ..

ಆದರೆ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದಿದ್ದು, ಭಾರತ ಆಸೀಸ್ ಗಿಂತ 9 ಅಂಕಗಳನ್ನು ಕಡಿಮೆ ಹೊಂದಿದೆ. ನ್ಯೂಜಿಲೆಂಡ್‌ನ ವಿಶ್ವದ ನಂ.1 ಏಕದಿನ ತಂಡವಾಗಿ ಹೊರ ಹೊಮ್ಮಿದೆ.

Ad Widget

ಇಂದು ಘೋಷಣೆಯಾದ ರ‍್ಯಾಂಕಿಂಗ್ ನಲ್ಲಿ ಐಸಿಸಿ ಪುರುಷರ ಟೆಸ್ಟ್ ತಂಡ ಶ್ರೇಯಾಂಕದಲ್ಲಿ ಪಾಕಿಸ್ತಾನವು ಇಂಗ್ಲೆಂಡ್ ಅನ್ನು ಆರನೇ ಸ್ಥಾನಕ್ಕೆ ತಳ್ಳಿದರೆ, ಆಸ್ಟ್ರೇಲಿಯಾವು ಎರಡನೇ ಸ್ಥಾನದಲ್ಲಿರುವ ಭಾರತಕ್ಕಿಂತ ಒಂಬತ್ತು ಅಂಕಗಳ ಮುನ್ನಡೆ ಹೊಂದಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

5 ವರ್ಷಗಳ ಕಾಲ ಟೆಸ್ಟ್ ನಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತವನ್ನು ಆಸ್ಟ್ರೇಲಿಯಾ ಈ ವಾರ್ಷಿಕ ಶ್ರೇಯಾಂಕದಲ್ಲಿ ಹಿಂದಿಕ್ಕಿದೆ. ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ.

Leave a Comment

Your email address will not be published. Required fields are marked *