ಸಮಗ್ರ ನ್ಯೂಸ್: 22 ವರ್ಷದ ಯುವಕ ಎಂಟು ತಿಂಗಳ ತುಂಬು ಗರ್ಭಿಣಿಯನ್ನು ಕತ್ತು ಹಿಸುಕಿ ಕೊಂದ ಘಟನೆ ಮುಂಬೈನಲ್ಲಿ ನಡೆದಿದೆ.
ಬುಧವಾರ ನಗರ ಕುರ್ಲಾ ಪ್ರದೇಶದ ನಿವಾಸವೊಂದರಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಕೋಮಲ್ ಸಂಜಯ್ ಸೋಂಕರ್ ಎಂದು ಗುರುತಿಸಲಾಗಿದೆ. ಮಹಿಳೆಯ ಜೊತೆಗೆ ಭ್ರೂಣವು ಸಹ ಆಕೆಯ ಗರ್ಭದಲ್ಲಿಯೇ ಸಾವನ್ನಪ್ಪಿದೆ.
ಆರೋಪಿ ಅರ್ಜುನ್ ಸೋಂಕರ್ ಮೃತ ಮಹಿಳೆಯ ಪತಿ ಸಂಜಯ್ ಅವರ ಸೋದರ ಸಂಬಂಧಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಅವರೊಂದಿಗೆ ವಾಸವಾಗಿದ್ದ. ಇದೀಗ ಆರೋಪಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆ ಬೆಳಕಿಗೆ ಬಂದ ಬಳಿಕ ಪೊಲೀಸರು ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಮತ್ತು 316(ತಪ್ಪಿತಸ್ಥನು ನರಹತ್ಯೆಯ ಕೃತ್ಯದ ಮೂಲಕ ಹುಟ್ಟಲಿರುವ ಮಗುವಿನ ಅಥವಾ ಭ್ರೂಣ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಈ ಕೊಲೆಗೆ ನಿಖರವಾದ ಕಾರಣ ಏನು ಎಂಬುವುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.