ಸಮಗ್ರ ನ್ಯೂಸ್: ಕೋವಿಡ್-19 ಹಾವಳಿಯಿಂದಾಗಿ ಹೇರಲಾಗಿದ್ದ ಲಾಕ್ಡೌನ್ ಸಂದರ್ಭದಲ್ಲಿನ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಾಗಿ ಉಂಟಾಗಿರುವ ಮಾರಕ ಸಂಗತಿಯೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯಿಂದಾಗಿ ಬಹಿರಂಗಗೊಂಡಿದೆ.
ಮಧ್ಯಪ್ರದೇಶದ ಆರ್ಟಿಐ ಕಾರ್ಯಕರ್ತ ಚಂದ್ರೇಶೇಖರ್ ಗೌರ್ ಎಂಬಾತ ಕೇಳಿದ್ದ ಪ್ರಶ್ನೆಗೆ ಸಿಕ್ಕ ಉತ್ತರ ಭಯಂಕರ ವಿಷಯವೊಂದನ್ನು ಬೆಳಕಿಗೆ ತಂದಿದೆ. ಈತ ಸಲ್ಲಿಸಿದ್ದ ಅರ್ಜಿಗೆ ರಾಷ್ಟ್ರೀಯ ಏಯ್ಡ್ಸ್ ತಡೆ ಸಂಸ್ಥೆ ನೀಡಿರುವ ಉತ್ತರ ಚಿಂತೆಗೀಡು ಮಾಡುವಂತಿದೆ.
ಲಾಕ್ಡೌನ್ ಅವಧಿಯಲ್ಲಿನ ಅಸುರಕ್ಷಿತ ಸಂಭೋಗದಿಂದಾಗಿ ದೇಶದಲ್ಲಿ 85 ಸಾವಿರಕ್ಕೂ ಅಧಿಕ ಮಂದಿ ಏಯ್ಡ್ಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ನ್ಯಾಕೋ ಅಂಕಿ-ಅಂಶ ತಿಳಿಸಿದೆ.
ಈ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 10,498, ಆಂಧ್ರಪ್ರದೇಶದಲ್ಲಿ 9521, ಕರ್ನಾಟಕದಲ್ಲಿ 8947, ಮಧ್ಯಪ್ರದೇಶದಲ್ಲಿ 3037 ಮತ್ತು ಪಶ್ಚಿಮ ಬಂಗಾಳದಲ್ಲಿ 2757 ಮಂದಿ ಏಯ್ಡ್ಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ನ್ಯಾಕೋ ಹೇಳಿದೆ.