Ad Widget .

ಪಸ್ಟ್ ನೈಟ್ ನಲ್ಲೇ ವಿಚ್ಛೇದನಗೊಂಡ ದಾಂಪತ್ಯ| ಆ ಮೊದಲ ರಾತ್ರಿ ಆಗಿದ್ದೇನು?

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಮಗ್ರ ನ್ಯೂಸ್: ಮದುವೆ ಎಂಬುದು ಹೊಸ ಜೀವನದ ಮುನ್ನುಡಿ. ಹತ್ತಾರು ಕನಸುಗಳನ್ನು ಹೊತ್ತು ನವಜೀವನಕ್ಕೆ ಅವರಿಬ್ಬರೂ ಅಣಿಯಾಗಿದ್ದರು. ಆದರೆ, ಮದುವೆಯಾದ ಮೊದಲ ರಾತ್ರಿಯೇ ಗಂಡನ ಮುಂದೆ ಕಹಿ ಸತ್ಯವೊಂದನ್ನು ಬಿಚ್ಚಿಟ್ಟಿದ್ದಕ್ಕಾಗಿ ಇಬ್ಬರು ಬೇರ್ಪಟ್ಟಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಈ ಪ್ರಕರಣ ನಡೆದಿದ್ದು, 2019ರಲ್ಲಿ ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ.

Ad Widget . Ad Widget . Ad Widget .

ಬಂಧು-ಮಿತ್ರರು, ಅಪಾರ ಜನರ ಮುಂದೆ ನವಜೋಡಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಮೊದಲ ರಾತ್ರಿ ಇಬ್ಬರು ತಮ್ಮ ಜೀವನದಲ್ಲಿ ನಡೆದ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಬಗ್ಗೆ ಪರಸ್ಪರ ಮಾತನಾಡಿದ್ದಾರೆ. ಈ ವೇಳೆ ವಧು ಹೇಳಿರುವ ಕಹಿ ಸತ್ಯವೊಂದು ಇಬ್ಬರನ್ನು ಮತ್ತಷ್ಟು ದೂರ ಮಾಡಿದೆ. ಜೊತೆಗೆ, ದಾಂಪತ್ಯ ಜೀವನವನ್ನೇ ಮುಗಿಸಿದೆ.

ಆಗಿದ್ದೇನು?: ಮದುವೆ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ತನ್ನ ಮೇಲೆ ಅತ್ಯಾಚಾರ ನಡೆದಿರುವ ವಿಷಯವನ್ನು ಪತಿ ಮುಂದೆ ಯುವತಿ ಮೊದಲ ರಾತ್ರಿಯಂದು ಹೇಳಿದಳು. ತನ್ನ ಸಂಬಂಧಿಯಿಂದಲೇ ದುಷ್ಕೃತ್ಯಕ್ಕೊಳಗಾಗಿರುವುದಾಗಿ ಆಕೆ ಘಟನೆಯನ್ನು ವಿವರಿಸಿದ್ದಾಳೆ. ಈ ಮಾತು ಕೇಳಿ ದಿಢೀರ್ ಶಾಕ್​ಗೊಳಗಾಗಿರುವ ಗಂಡ, ತನ್ನ ಸಂಬಂಧಿಕರ ಮುಂದೆ ಮಾಹಿತಿ ಹಚ್ಚಿಕೊಂಡಿದ್ದಾನೆ. ಇಷ್ಟೇ ಅಲ್ಲ, ಆಕೆಯಿಂದ ವಿಚ್ಛೇದನ ಪಡೆದುಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದಾನೆ.

ಯುವಕ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​, ನ್ಯಾಯಾಲಯಕ್ಕೆ ಹಾಜರಾಗುವಂತೆ ಯುವತಿಗೆ ಹಲವು ಬಾರಿ ನೋಟಿಸ್ ನೀಡಿದೆ. ಸುಮಾರು ಮೂರು ವರ್ಷಗಳ ಕಾಲ ವಿಚಾರಣೆಗೆ ಹಾಜರಾಗದ ಕಾರಣ ಕೋರ್ಟ್​​ ಮುದುವೆಯನ್ನು ರದ್ದುಪಡಿಸಿ, ಆದೇಶಿಸಿತು.

Leave a Comment

Your email address will not be published. Required fields are marked *