ಪಯಸ್ವಿನಿ ಹೊಳೆಯಲ್ಲಿ ಅತೀ ದೊಡ್ಡ ಆಮೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Ad Widget ... ..

ಸಮಗ್ರ ನ್ಯೂಸ್: ಅತೀ ದೊಡ್ಡ ಆಮೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಕಾಸರಗೋಡಿನ ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಗಿದೆ.

Ad Widget

ಬಾವಿಕ್ಕರೆ ಸಮೀಪದ ಅಣೆಕಟ್ಟಿನ ಬದಿಯಲ್ಲಿ ಆಮೆ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆಮೆಯು ಒಂದು ಮೀಟರ್ ಉದ್ದ 62 ಸೆ. ಮೀ. ಅಗಲ ಹೊಂದಿದೆ.

ಈ ಹೆಣ್ಣು ಆಮೆ 40 ಕಿಲೋ ಭಾರ ಹೊಂದಿದೆ. ಹತ್ತು ವರ್ಷ ಪ್ರಾಯವನ್ನು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಸಿಹಿ ನೀರಿನಲ್ಲಿ ಈ ಆಮೆ ಕಂಡು ಬರುತ್ತಿದ್ದು, 2010ರಲ್ಲಿ ಕೋಜಿಕ್ಕೋಡ್ ಕುಟ್ಯಾಡಿ ಹೊಳೆಯಲ್ಲಿ ಇಂತಹ ಆಮೆ ಕಂಡು ಬಂದಿತ್ತು. ಇದಾದ ಬಳಿಕ ಪಯಸ್ವಿನಿ ಹೊಳೆಯಲ್ಲಿ ಈ ಅಪರೂಪದ ಆಮೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

Leave a Comment

Your email address will not be published. Required fields are marked *