Ad Widget .

ನಿತ್ಯ ಕಾಡುವ ಒಣಕೆಮ್ಮು ಇದೆಯೇ? ಇಲ್ಲಿದೆ ಸರಳ ಆಯುರ್ವೇದ ಪರಿಹಾರ…

Ad Widget . Ad Widget .

ಸಮಗ್ರ ವಿಶೇಷ: ಶೀತ ಕೆಮ್ಮು ಮತ್ತು ಒಣ ಕೆಮ್ಮು ಸಾಧಾರಣವಾಗಿ ಪ್ರತೊಯೊಬ್ಬನನ್ನೂ ಬಾಧಿಸುವ ಖಾಯಿಲೆ. ಶೀತದ ವಿಚಾರದಲ್ಲಿ ಮನುಷ್ಯನಿಗೆ ಎದುರಾಗುವ ಕೆಮ್ಮು, ಮೊದಲು ನೆಗಡಿಯಾಗಿ ಎದೆಯಲ್ಲಿ ಕಫ ಕಟ್ಟಿ ನಂತರ ಕೆಮ್ಮು ಪ್ರಾರಂಭವಾಗುತ್ತದೆ. ಆದರೆ ಒಣ ಕೆಮ್ಮು ಹಾಗಲ್ಲ. ಮೊದಲು ಗಂಟಲು ಕೆರೆತದಿಂದ ಉಂಟಾಗಿ ನಂತರ ಜ್ವರ ಮತ್ತು ಅಲರ್ಜಿಗೆ ಕಾರಣವಾಗುತ್ತದೆ. ನಿರ್ಲಕ್ಷಿಸಿದರೆ ಮುಂದೆ ದೊಡ್ಡ ಅಪಾಯವನ್ನು ಎದುರಿಸಬೇಕಾಗಬಹುದು.

Ad Widget . Ad Widget .

ಈ ಒಣಕೆಮ್ಮು ಶಮನಕ್ಕೆ ಮನೆಯಲ್ಲಿ ಮಾಡಿಕೊಳ್ಳಬಹುದಾದ ಸರಳ ಪರಿಹಾರಗಳು ಇಲ್ಲಿವೆ.

  1. ಜೇನು: ಇದು ಗಂಟಲಿನಲ್ಲಿ ಒಂದು ಪದರವನ್ನು ಮಾಡಿ ಕೆರೆತ ಮತ್ತು ಇನ್ಫೆಕ್ಷನ್ ತಡೆಗಟ್ಟುತ್ತದೆ.ಇದನ್ನು ನೀರಿನೊಡನೆ ಸೇವಿಸಲುಬಹುದು.
    ಜೇನನ್ನು ೧ವರ್ಷದ ಒಳಗಿನ ಮಕ್ಕಳಿಗೆ ಕೊಡುವುದು ಅಪಾಯಕಾರಿ. ಜೇನು ತುಪ್ಪದಲ್ಲೂ ಸಹ ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳಿದ್ದು, ಮನುಷ್ಯನ ಆರೋಗ್ಯಕ್ಕೆ ಉಂಟಾಗುವ ಸೋಂಕುಗಳನ್ನು ನಿವಾರಣೆ ಮಾಡುವಲ್ಲಿ ಯಶಸ್ವಿಯಾಗುತ್ತದೆ.
  2. ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಇನ್ಫೆಕ್ಷನ್ ತಡೆಗಟ್ಟಲುಬಹುದು.

3.ಶುಂಠಿ: ಶ್ವಾಸನಾಳದ ರಿಫ್ಲೆಕ್ಸ್ ಸಡಿಲಗೊಳಿಸಿ ಕಫವನ್ನು ಹೊರ ಹಾಕಲು ಪ್ರಯತ್ನಿಸುತ್ತದೆ. ಇನ್ಫೆಕ್ಷನ್ ತಡೆಗಟ್ಟುತ್ತದೆ. ಅತಿಯಾದ ಪ್ರಮಾಣ ಬೇಡ ಏಕೆಂದರೆ ಎದೆನೋವು,ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.

4.ಅರಿಶಿನ: ಅರಿಶಿನದಲ್ಲಿ ಅನೇಕ ಔಷಧೀಯ ಗುಣ ಲಕ್ಷಣಗಳಿವೆ. ಶೀತ, ನೆಗಡಿ ತರಹದ ಹಲವಾರು ಸಮಸ್ಯೆಗಳಿಗೆ ಅರಿಶಿನ ಒಳ್ಳೆಯ ಮನೆ ಮದ್ದು. ಕೆಮ್ಮು ಬಂದಾಗ ಹಾಲಿಗೆ ಸ್ವಲ್ಪ ಅರಿಶಿನ ಮಿಶ್ರಣ ಮಾಡಿ ಕುಡಿದರೆ ಒಳ್ಳೆಯ ಉಪಯೋಗವಾಗುತ್ತದೆ.

ದಿನೇ ದಿನೇ ಹೆಚ್ಚಾಗಿ ಬೇರೆ ರೀತಿಯ ರೋಗ ಲಕ್ಷಣಕ್ಕೆ ತಿರುಗಿದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಿದೆ ಮೊದಲು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಬಹಳ ಸೂಕ್ತ.

ಹೆಚ್ಚಿನ ಮಾಹಿತಿಗಾಗಿ…
ಡಾ| ಆದಿತ್ಯ ಸಿ.,
ಶ್ರೀ ಹೋಮಿಯೋ ಕೇರ್,
ಕುಕ್ಕೆ ಸುಬ್ರಹ್ಮಣ್ಯ:
ಮೊಬೈಲ್ ನಂ: 8073052529 / 8861210292

Leave a Comment

Your email address will not be published. Required fields are marked *