Ad Widget .

“ಶರತ್ ಮಡಿವಾಳನಂತೆ‌ ನಿನ್ನ ಹೆಣವೂ ಬೀಳುತ್ತೆ”| ಪಂಚಾಯತ್ ಸದಸ್ಯನಿಗೆ ಕೊಲೆ ಬೆದರಿಕೆ| ದೂರು ನೀಡಿದರೂ ಎಫ್ಐಆರ್ ದಾಖಲಿಸದ ಪೊಲೀಸರು

ಸಮಗ್ರ ನ್ಯೂಸ್: ಅನಾಮಿಕ ಫೋನ್ ಕರೆಯೊಂದು ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದು ದೂರು ದಾಖಲಾಗಿರುವ ಘಟನೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಗ್ರಾ.ಪಂ ಸದಸ್ಯ ಚಂದ್ರಹಾಸ ಈಶ್ವರಮಂಗಲ ಎಂಬವರಿಗೆ ಕಳೆದ ವಾರ ಹೊಸ ನಂಬರ್ ಗಳಿಂದ ಬೆದರಿಕೆ ಕರೆ ಬಂದಿದ್ದು, ಕೂಡಲೆ ಚಂದ್ರಹಾಸ್ ಅವರು ಪುತ್ತೂರು ಗ್ರಾಮಾಂತರ ಠಾಣೆಗೆ ತೆರಳಿ ಈ ಬಗ್ಗೆ ಕೇಸ್ ದಾಖಲಿಸಿದ್ದರು.

Ad Widget . Ad Widget . Ad Widget .

ಬೆದರಿಕೆ ಕರೆಯೊಡ್ಡಿದವರ ಮೇಲೆ ಕೇಸ್ ದಾಖಲಿಸುವುದಕ್ಕೆ ನ್ಯಾಯಾಲಯದಿಂದ ಅನುಮತಿ ಕೋರಿ ಅರ್ಜಿ ತರುವಂತೆ ಠಾಣೆಯಲ್ಲಿ ತಿಳಿಸಿದ್ದಾರೆ. ಅದರಂತೆಯೆ ಅವರು ಪುತ್ತೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೂ ಇವತ್ತಿನ ತನಕ ಯಾವುದೇ ಉತ್ತರ ಸಿಗದಿರುವುದಕ್ಕೆ ಚಂದ್ರಹಾಸ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ ಬಂದಾಗ ಸುಮೋಟೋ ಮೂಲಕ ಕೂಡಲೇ ಅಪರಾಧಿಗಳನ್ನ ಬಂಧಿಸಲಾಗುತ್ತದೆ. ಆದರೆ ಜನಸಾಮಾನ್ಯರಿಗೆ ಬೆದರಿಕೆ ಬಂದಾಗ ತಪ್ಪಿತಸ್ಥರ ಮೇಲೆ ಕೇಸ್ ದಾಖಲಿಸುವುದಕ್ಕೆ ಮೀನ ಮೇಷ ಎಣಿಸುತ್ತಾರೆ. ನ್ಯಾಯ ಮೂರ್ತಿಗಳಿರುವ ಈ ಕಾನೂನು ಜನ ಸಾಮನ್ಯರಿಗೆ ಯಾಕೆ ಅನ್ವಯಿಸುವುದಿಲ್ಲ.

‘ಶರತ್ ಮಡಿವಾಳ ನಂತೆ ನಿನ್ನ ಹತ್ಯೆ ಮಾಡುತ್ತೇವೆ’ ಎಂದು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ ಈಶ್ವರಮಂಗಲ ಇವರಿಗೆ ಬೆದರಿಕೆ ಬಂದು ಸುಮಾರು ವಾರಗಳೇ ಕಳೆದಿವೆ. ಆದರೂ ಇಲ್ಲಿಯವರೆಗೆ FIR ದಾಖಲಾಗಿಲ್ಲ ಅದಕ್ಕಾಗಿ ಕೋರ್ಟ್ ನ ಅನುಮತಿ ಬೇಕು ಆದರೆ ನ್ಯಾಯಾಧೀಶರಿಗೆ ಬೆದರಿಕೆ ಬಂದಾಗ ಇದಕ್ಕೆ ಯಾವ ಕೋರ್ಟಿನ ಅನುಮತಿಯೂ ಬೇಡ ಸುಮೋಟೋ ದ ಮೂಲಕ ಅವರ ಬಂಧನವಾಗುತ್ತದೆ.

ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿರುವ ಒಬ್ಬ ಗ್ರಾಮ ಪಂಚಾಯತ್ ಸದಸ್ಯನಿಗೆ ಬೆದರಿಕೆ ಕರೆ ಬಂದಿದೆ ಎಂಬ ಸುದ್ದಿ ಮಾದ್ಯಮಗಳ ಮೂಲಕವು ಬಂದಿದ್ದು, ತಪ್ಪಿತಸ್ಥರನ್ನು ಕೂಡಲೆ ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಕೇಳದಿರುವುದು ಬಹಳ ಬೇಸರವಾಗಿದೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *