Ad Widget .

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ಮಾಂಸದಂಧೆ| ಸಿಕ್ಕಿಬಿದ್ದ ಖದೀಮರಲ್ಲಿ ಮೂವರು ವೃದ್ಧರು!; ಆಘಾತಕಾರಿ ಮಾಹಿತಿ ಬಹಿರಂಗಗೊಳಿಸಿದ ಕಮಿಷನರ್|

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಯಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಮತ್ತೊಂದು ಕರಾಳಮುಖ ಬಯಲಾಗಿದೆ. ಮತ್ತೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

Ad Widget . Ad Widget . Ad Widget .

ಈ ಹಿಂದೆ ವೇಶ್ಯಾವಾಟಿಕೆ ದಂಧೆಯಲ್ಲಿ ಓರ್ವ ಅಪ್ರಾಪ್ತ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಂತ್ರಸ್ಥರನ್ನು ಮಂಗಳೂರು ಪೊಲೀಸರು ರಕ್ಷಿಸಿದ್ದರು. ಇದೀಗ ಮತ್ತೊಬ್ಬ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ಮಂಗಳೂರು ಪೊಲೀಸರು ಮತ್ತೆ ಪ್ರತ್ಯೇಕ 4 ಪೋಕ್ಸೋ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ನಾಲ್ವರು ಆರೋಪಿಗಳ ಬಂಧನ:

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಮೂವರು ವೃದ್ಧರು ಸೇರಿದ್ದಾರೆ. ಆರೋಪಿಗಳನ್ನು ರಶೀದ್ ಸಾಹೇಬ್(73), ಮೊಹಮ್ಮದ್ ಆಲಿ(74), ಗ್ರೆಗರಿ ಲಿಯೋನಾರ್ಡ್ ಸಿಕ್ವೇರಾ(62) ಹಾಗೂ ಇಸ್ಮಾಯಿಲ್(41) ಎಂದು ಗುರುತಿಸಲಾಗಿದೆ. ಗ್ರಾಹಕರ ರೀತಿಯಲ್ಲಿ ಬಂದು ಈ ನಾಲ್ವರು ಆರೋಪಿಗಳು ವಿದ್ಯಾರ್ಥಿನಿಗೆ ಲೈಂಗಿಕ ‌ಕಿರುಕುಳ ನೀಡಿದ್ದರು. ಈ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ನಂದಿಗುಡ್ಡ ರಿಯಾನಾ ರೆಸಿಡೆನ್ಸಿ ಅಪಾರ್ಟ್ಮೆಂಟ್‌ನ ಪೆಂಟ್ ಹೌಸ್‌ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಬೆಳಕಿಗೆ ಬಂದಿತ್ತು. ಮಂಗಳೂರಿನ ಸಿಸಿಬಿ ಪೊಲೀಸರು ಪ್ರಕರಣದ ಬೆನ್ನು ಬಿದ್ದು ತನಿಖೆ ನಡೆಸಿದ್ದರು. ಈ ಸಂಬಂಧ ಇದೀಗ 5 ಪ್ರಕರಣಗಳನ್ನು ದಾಖಲಿಸಿ 10 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.

Leave a Comment

Your email address will not be published. Required fields are marked *