ಸಮಗ್ರ ನ್ಯೂಸ್: ಔಷಧಿ ತರಲೆಂದು ಮಗನೊಂದಿಗೆ ಪುತ್ತೂರಿಗೆ ತೆರಳಿದ್ದ ಕಡಿರುದ್ಯಾವರ ಗ್ರಾಮದ ಮಹಿಳೆಯೋರ್ವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ನಡೆದಿದೆ.
ಕಡಿರುದ್ಯಾವರ ಗ್ರಾಮದ ಎರ್ಮಾಳ್ ಪಲ್ಕೆ ನಿವಾಸಿ ಶಹಜಾದ್ ರವರ ಪತ್ನಿ ರಶೀನಾ ಹಾಗೂ ಅವರ ಪುತ್ರ ಮುಸೈಬ್ ಹಕ್ ಎಂಬವರು ನಾಪತ್ತೆಯಾಗಿದ್ದಾರೆ. ಶಹಜಾದ್ ರವರು ತಮ್ಮ ಪತ್ನಿ ರಶೀನಾ, ಪುತ್ರ ಮುಸೈಬ್ ಹಕ್ ರೊಂದಿಗೆ ಪುತ್ತೂರಿಗೆ ಔಷಧಿ ತರಲೆಂದು ತೆರಳಿದ್ದು, ಅಲ್ಲಿಂದ ಮರಳಿ ಮನೆಗೂ ಬಾರದೆ ನಾಪತ್ತೆಯಾಗಿರುತ್ತಾರೆ ಎಂಬುವುದಾಗಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.






