ಕೊಚ್ಚಿ: ಸೊಂಟಕ್ಕೆ ಟ್ಯಾಟೂ ಹಾಕಿಸಿಕೊಳ್ಳಲು ಹೋದವಳ ಅತ್ಯಾಚಾರಗೈದ ಟ್ಯಾಟೂ ಕಲಾವಿದ

Ad Widget ... ..

ಸಮಗ್ರ ನ್ಯೂಸ್: ಕೇರಳದ ಕೊಚ್ಚಿಯಲ್ಲಿರುವ ಟ್ಯಾಟೂ ಕಲಾವಿದನ ವಿರುದ್ಧ ಕೆಲ ಯುವತಿಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಟ್ಯೂಟೂ ಕಲಾವಿದ ಸುಜೀಶ್​ನ​​ ಕರಾಳ ಮುಖವನ್ನು ಒಂದೊಂದಾಗಿ ಬಿಚ್ಚಿಟ್ಟಿರುವ ಸಂತ್ರಸ್ತೆಯರು ಟ್ಯಾಟೂ ಪಾರ್ಲರ್​ನ ಅಕ್ರಮವನ್ನು ಹೊರ ಹಾಕಿದ್ದಾರೆ.

Ad Widget

ಆರೋಪಿ ಸುಜಿತ್ ಟ್ಯಾಟೂ ಸೂಜಿಯಿಂದ ಹೆದರಿಸಿ ದೌರ್ಜನ್ಯ ಎಸಗಿದರು ಎಂದು ಸಂತ್ರಸ್ತೆಯೊಬ್ಬಳು ಆರೋಪಿಸಿದರೆ, ವರ್ಷದ ಹಿಂದೆ ಸುಜೀಶ್​ ಅತ್ಯಾಚಾರ ಮಾಡಿದ್ದಾರೆ ಎಂದು ಮತ್ತೊಬ್ಬ ಸಂತ್ರಸ್ತೆ ಹೇಳಿದ್ದಾರೆ. ಅಂದಹಾಗೆ ಸುಜೀಶ್​ ಟ್ಯೂಟೂ ಪಾರ್ಲರ್​ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ಟ್ಯಾಟೂ ಕೇಂದ್ರ. ಅಲ್ಲಿಗೆ ಸಿನಿಮಾ ಕಲಾವಿದರು ಸೇರಿ ಅನೇಕ ಸೆಲೆಬ್ರಿಟಿಗಳು ಟ್ಯಾಟೂ ಹಾಕಿಸಿಕೊಳ್ಳಲು ಬರುತ್ತಾರೆ.

ಸಾಮಾಜಿಕ ಜಾಲತಾಣ ವೇದಿಕೆ ರೆಡ್ಡಿಟ್​ನಲ್ಲಿ ಮಹಿಳೆಯೊಬ್ಬರು ಸುಜೀಶ್ ಕರ್ಮಕಾಂಡ ವಿವರಿಸಿದ್ದಾರೆ. ಅನೇಕ ಮಹಿಳೆಯರು ಕೂಡ ತಮಗಾದ ಕಹಿ ಅನುಭವವನ್ನು ಹೊರಗಾಕಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವಾಗ ನನ್ನ ಖಾಸಗಿ ಅಂಗವನ್ನು ಸ್ಪರ್ಶಿಸಿದ ಸುಜೀಶ್​, ನನ್ನನ್ನು ತುಂಬಾ ಬಲವಂತ ಮಾಡಿದರು ಎಂದು ಆರೋಪ ಮಾಡಿದ್ದಾರೆ.

Leave a Comment

Your email address will not be published. Required fields are marked *