Ad Widget .

ಬಂಟ್ವಾಳ: ಜೇನು ನೋಣ ದಾಳಿ; 9 ಮಂದಿ ಗಂಭೀರ

ಸಮಗ್ರ ನ್ಯೂಸ್: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಜೇನು ನೋಣ ಕಚ್ಚಿ ಗಂಭೀರ ಸ್ಥಿತಿಯಲ್ಲಿ ಒಂಬತ್ತು ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಕಲಾಬಾಗಿಲು ಎಂಬಲ್ಲಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಲಾಬಾಗಿಲು ನಿವಾಸಿಗಳಾದ ಗಂಗಯ್ಯ ಗೌಡ (60) ಶೀನ ಶೆಟ್ಟಿ (48) ಐತಪ್ಪ ಶೆಟ್ಟಿ ( 76) ಅರುಣ್ ಶೆಟ್ಟಿ ( 34) ಲಲಿತಾ ,(49) ಎಂಬವರು ಜೊತೆ ಉಳಿದ ನಾಲ್ವರ ಜೇನು ನೊಣ ಕಚ್ಚಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ನಾಲ್ವರ ಹೆಸರು ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

Ad Widget . Ad Widget . Ad Widget .

ಇರ್ವತ್ತೂರು ಗ್ರಾಮದ ಕಲಾಬಾಗಿಲು ಎಂಬಲ್ಲಿ ಅಲ್ಲಿನ ಸ್ಥಳೀಯ ನಿವಾಸಿಗಳು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೀಟಿಂಗ್ ಗೆ ರಸ್ತೆಯಲ್ಲಿ ಜೊತೆಯಾಗಿ ತೆರಳುವ ವೇಳೆ ಜೇನು ನೊಣ ಕಚ್ಚಿದ್ದು, ನೊಣಗಳ ಗೂಡಿಗೆ ಗಿಡುಗ ಕಚ್ಚಿದ ಪರಿಣಾಮ ಕೋಪಗೊಂಡ ಜೇನು ನೊಣಗಳು ದಾರಿಯಲ್ಲಿ ಹೋಗುವ ಅಮಾಯಕರ ಮೇಲೆ ದಾಳಿ ಮಾಡಿದೆ.

ಗಾಯಗೊಂಡ ಐವರನ್ನು ಕೂಡ ಪುಂಜಾಲಕಟ್ಟೆ ಆಸ್ಪತ್ರೆಯ 108 ಅಂಬ್ಯುಲೆನ್ಸ್ ಚಾಲಕ ಜಗನ್ನಾಥ್ ಶೆಟ್ಟಿ ಅವರು ಸಕಾಲದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಐವರಿಗೂ ಚಿಕಿತ್ಸೆ ನೀಡಲಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ಅವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *