ಹರಿಹರದಲ್ಲಿ ಭೀಕರ ಅಪಘಾತ| ಮೂವರು ಸಾವು; ಏಳು ಮಂದಿ ಗಂಭೀರ|

ಸಮಗ್ರ ನ್ಯೂಸ್: ಅಟೋ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ, ಮೂವರು ಮೃತಪಟ್ಟಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ. ಹರಿಹರ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

Ad Widget ... ..

ಹರಿಹರದಿಂದ ಬೆಳ್ಳೂಡಿ ಕಡೆಗೆ ಹೊರಟಿದ್ದ ಆಟೊ ಹಾಗೂ ಮಲೆಬೆನ್ನೂರು ಕಡೆಯಿಂದ ಹರಿಹರದ ಕಡೆಗೆ ಬರುತ್ತಿದ್ದ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Ad Widget

ನಾಗೇನಹಳ್ಳಿಯ ಚಂದ್ರಮ್ಮ (65), ಬೆಳ್ಳೂಡಿ ಗ್ರಾಮದ ಅನಿಲ್ ಕುಮಾರ್ (19) ಹಾಗೂ ಬಸವರಾಜು ಎಸ್. (19) ಮೃತಪಟ್ಟಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *