ಕಾಸರಗೋಡು: ಹುಟ್ಟು ಹಬ್ಬದ ದಿನದಂದೇ ಅಪಘಾತಕ್ಕೆ ಬಲಿಯಾದ ಬಾಲಕಿ

Ad Widget ... ..

ಸಮಗ್ರ ನ್ಯೂಸ್: ಹುಟ್ಟುಹಬ್ಬದಂದೇ ಅಪಘಾತಕ್ಕೆ ಸಿಲುಕಿ ಹನ್ನೊಂದು ವರ್ಷದ ಬಾಲಕಿ ಬಾಲಕಿ ಮೃತಪಟ್ಟ ದಾರುಣ ಘಟನೆ ಮಂಜೇಶ್ವರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

Ad Widget

ಬಂಗ್ರಮಂಜೇಶ್ವರ ಕಟ್ಟೆಬಜಾರಿನ ರವಿಚಂದ್ರ ಹೆಗ್ಡೆ ರವರ ಪುತ್ರಿ ದೀಪಿಕಾ (11) ಮೃತಪಟ್ಟವರು. ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸಾಮಾಗ್ರಿ ತರಲೆಂದು ಮಂಜೇಶ್ವರಕ್ಕೆ ತಂದೆ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಮಂಜೇಶ್ವರ ಒಳರಸ್ತೆಯ ಗಿಳಿವಿಂಡು ಸಮೀಪ ಇವರು ಸಂಚರಿಸುತ್ತಿದ್ದ ಸ್ಕೂಟರ್ ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಡಿಕ್ಕಿಯಿಂದ ಇಬ್ಬರು ರಸ್ತೆ ಬದಿಗೆ ಬಿದ್ದಿದ್ದು , ಗಂಭೀರ ಗಾಯಗೊಂಡ ದೀಪಿಕಾ ಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ ರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಳು. ತಂದೆ ರವಿಚಂದ್ರ ಗಾಯಗೊಂಡಿದ್ದು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *