ವಿಜಯಪುರ: ಕುಂಕುಮ ಇಟ್ಟು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ಕಾಲೇಜು

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ಮುಂದುವರೆದಿದ್ದು, ಇದೀಗ ಹಣೆಗೆ ಕುಂಕುಮ ಇಟ್ಟು ಬಂದ ವಿದ್ಯಾರ್ಥಿಗೆ ಕಾಲೇಜು ಪ್ರವೇಶಕ್ಕೆ ನಿರಾಕರಿಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.

Ad Widget ... ..

ಇಂಡಿ ಪಟ್ಟಣದ ಸರ್ಕಾರಿ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ಹಣೆಗೆ ಕುಂಕುಮ ಇಟ್ಟುಕೊಂಡು ಬಂದಿದ್ದ. ಈ ವೇಳೆ ದೈಹಿಕ ಶಿಕ್ಷಕರು ವಿದ್ಯಾರ್ಥಿಯನ್ನು ತಡೆದು ಕುಂಕುಮ ತೆಗೆದು ಕಾಲೇಜಿಗೆ ಬರುವಂತೆ ಹೇಳಿದ್ದಾರೆ.

Ad Widget

ಹೀಗಾಗಿ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ವಾಗ್ವಾದ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿಯನ್ನು ತರಗತಿಗೆ ಕಳಿಸಿದ್ದಾರೆ.

Leave a Comment

Your email address will not be published. Required fields are marked *