10ನೇ ಕ್ಲಾಸ್ ವಿದ್ಯಾರ್ಥಿಯ ಮದ್ವೆಯಾದ ಪೋಲಿ ಟೀಚರ್| ಇವರಿಬ್ಬರ ಪ್ರೇಮ ಪ್ರಕರಣ ಕಂಡು ದಿಗಿಲುಗೊಂಡ ಪೊಲೀಸರು|

Ad Widget ... ..

ಚೆನ್ನೈ: ಪ್ರೇಮ ಕುರುಡು ಎನ್ನುವಂತೆ 10ನೇ ವಿದ್ಯಾರ್ಥಿಯೊಂದಿಗೆ ಅದೇ ಕ್ಲಾಸ್‌ನ ಟೀಚರ್‌ಗೆ ಲವ್‌ ಆಗಿರುವ ಅಚ್ಚರಿಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇಬ್ಬರಿಗೂ ಪರಸ್ಪರ ಪ್ರೀತಿಯುಂಟಾಗಿ ಮದುವೆಯೂ ಆಗಿ ಪೇಚಿಗೆ ಸಿಲುಕಿದ್ದಾರೆ.

Ad Widget

ಇಲ್ಲಿಯ ವಿಕ್ರಮಂಗಲಂ ಪ್ರೌಢಶಾಲೆಯಲ್ಲಿ ಶಿಕ್ಷಕಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 10ನೇ ಕ್ಲಾಸ್‌ನಲ್ಲಿ ಓದುತ್ತಿರುವ ಹುಡುಗನೊಬ್ಬನ ಮೇಲೆ ಈ ಶಿಕ್ಷಕಿಗೆ ಪ್ರೀತಿಯುಂಟಾಗಿದೆ. ಅದನ್ನು ಆಕೆ ಬಾಲಕನಲ್ಲಿ ನಿವೇದನೆ ಮಾಡಿಕೊಂಡಾಗ, ಆತನಿಗೂ ಶಿಕ್ಷಕಿ ಮೇಲೆ ಪ್ರೀತಿಯಾಗಿರುವುದಾಗಿ ಹೇಳಿದ್ದಾನೆ. ಹೀಗೆ ಇಬ್ಬರೂ ಕದ್ದುಮುಚ್ಚಿ ಭೇಟಿಯಾಗುತ್ತ ತಮ್ಮ ಕೆಲಸ ಮುಂದುವರೆಸಿದ್ದರು.

ಕೊನೆಗೂ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಮಜವರಾಯನಲ್ಲೂರು ಗ್ರಾಮದ 17 ವರ್ಷದ ಈ ಬಾಲಕ ತಮ್ಮ ಪ್ರೀತಿಯ ವಿಷಯವನ್ನು ಹಾಗೂ ಶಿಕ್ಷಕಿಯನ್ನು ಮದುವೆಯಾಗುವ ಬಗ್ಗೆ ಪಾಲಕರ ಬಳಿಯೂ ಮಾತನಾಡಿದ್ದಾನೆ. ಆದರೆ ಅವರು ನಿರಾಕರಿಸಿದ್ದಾರೆ. ಕೊನೆಗೆ ಇಬ್ಬರೂ ಓಡಿಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಮದುವೆಯ ವಿಷಯ ತಿಳಿಯುತ್ತಲೇ ಬಾಲಕನ ಪಾಲಕರು ಕಂಪ್ಲೇಂಟ್‌ ಕೊಟ್ಟಿದ್ದಾರೆ. ಈ ಜೋಡಿಯನ್ನು ಬೆನ್ನತ್ತಿ ಹೋದ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ. ಪೊಲೀಸರು ತಮ್ಮನ್ನು ಹುಡುಕಿ ಬರುವ ವಿಷಯ ತಿಳಿಯುತ್ತಲೇ ಇವರಿಬ್ಬರೂ ಆತ್ಮಹತ್ಯೆಯೂ ಯತ್ನಿಸಿದ್ದು, ಇವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ಈ ನಡುವೆ ಬಾಲಕ ಅಪ್ರಾಪ್ತನಾಗಿರುವ ಕಾರಣ, ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ದೂರು ದಾಖಲು ಮಾಡಲಾಗಿದೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Leave a Comment

Your email address will not be published. Required fields are marked *