ಮುರ್ಡೇಶ್ವರ: ಪತಿಯೊಂದಿಗೆ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಬಂದ ನವವಿವಾಹಿತೆ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನವವಿವಾಹಿತೆಯೊಬ್ಬಳು ಪತಿಯೊಂದಿಗೆ ಮುರ್ಡೇಶ್ವರಕ್ಕೆ ಬಂದಿದ್ದಳು. ಈ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿ ರೂಮ್ ನೋಡಲು ಪತಿ ಗೆಸ್ಟ್ ಹೌಸ್ ಗೆ ಹೋಗಿ ವಾಪಸ್ ಬಂದು ನೋಡಿದಾಗ ಪಾರ್ಕಿಂಗ್ ಸ್ಥಳದ ಕಟ್ಟೆ ಮೇಲೆ ಕುಳಿತಿದ್ದ ಮಹಿಳೆ ಕಾಣೆಯಾಗಿದ್ದಾಳೆ.
ಗೋವಾದ ವಾಸ್ಕೋಡಗಾಮ ಬೈನಾದ ನಿವಾಸಿ ವಿದ್ಯಾ ಸಂದೀಪ ಹರಿಜನ ಕಾಣೆಯಾದ ಮಹಿಳೆ. ಎಷ್ಟು ಹುಡುಕಿದರೂ ಮಹಿಳೆ ಪತ್ತೆಯಾಗಿಲ್ಲ. ಹೀಗಾಗಿ ಮುರ್ಡೇಶ್ವರ ಠಾಣೆಯಲ್ಲಿ ಆಕೆಯ ಪತಿ ದೂರು ದಾಖಲಿಸಿದ್ದು ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.