ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಿಂದೆ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು, ಅವರು ಕಾಂಗ್ರೆಸ್ ನ ಶಿಸ್ತಿನ ಕಾರ್ಯಕರ್ತರಾಗಿದ್ದರು ಎಂದು ಶಾಸಕ ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಯುಟಿ ಖಾದರ್, ನಳಿನ್ ಕುಮಾರ್ ಕಟೀಲ್ ನನ್ನನ್ನು ಮತ್ತು ರಮಾನಾಥ ರೈಯನ್ನು ಬಿಟ್ಟು ಎಲ್ಲರನ್ನೂ ಬಿಜೆಪಿಗೆ ಸೇರಿಸುತ್ತೇನೆ ಎಂದು ಹೇಳಿದ್ದಾರೆ. ಅವರು ಕಾಂಗ್ರೆಸ್ ನಲ್ಲಿ ಇದ್ದವರು. ಪುತ್ತೂರಿನಲ್ಲಿ ವಿನಯ ಕುಮಾರ್ ಸೊರಕೆ ಪರವಾಗಿ ಕೆಲಸವನ್ನು ಮಾಡಿದವರು. ಅವರಿಗೆ ಕಾಂಗ್ರೆಸ್ ನ ಒಳ್ಳೆತನ ತಿಳಿದಿದೆ. ಅದಕ್ಕಾಗಿ ಅವರು ಈ ರೀತಿ ಹೇಳಿಕೆಯನ್ನು ಕೊಡುತ್ತಿದ್ದಾರೆ ಎಂದು ಯುಟಿ ಖಾದರ್ ಹೇಳಿದ್ದಾರೆ.