ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಿ. ಎಸ್. ಕುಲಾಲ್ ವರಿಗೆ ಗೌರವಾರ್ಪಣೆ

Ad Widget ... ..

ಮಂಗಳೂರು :ದ. ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ದ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಿ. ಎಸ್. ಕುಲಾಲ್ ಅವರನ್ನು ನ.7ರಂದು ಸಂಘದ ಅಧ್ಯಕ್ಷರಾಗಿರುವ ಮಯೂರ್ ಉಳ್ಳಾಲ್ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.

Ad Widget

ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಬಿ.ಎಸ್ ಕುಲಾಲ್ ಮಾತನಾಡುತ್ತಾ ಪತ್ರಿಕೋದ್ಯಮದಲ್ಲಿ ನನ್ನ ಕರ್ತವ್ಯದ ಸೇವೆಯನ್ನು ಮಾಡಿದ್ದೇನೆ ಪ್ರಶಸ್ತಿಗಾಗಿ ಯಾವುದೇ ರೀತಿಯ ಶಿಫಾರಸನ್ನು ಮಾಡಿಲ್ಲ ಮತ್ತು ಅರ್ಜಿಯನ್ನು ನೀಡಿಲ್ಲ ನನ್ನ ಪತ್ರಿಕಾ ಮಾಧ್ಯಮದ ಸೇವೆಯನ್ನು ಜಿಲ್ಲಾಡಳಿತ ಗುರುತಿಸಿದೆ ಇದು ಜಿಲ್ಲೆಯ ಸ್ವಾರ್ಥರಹಿತ ನಿಷ್ಠಾವಂತ ಪತ್ರಕರ್ತರಿಗೆ ಸಂದ ಗೌರವಾಗಿದೆ. ಸಮಾಜ ನನ್ನನ್ನು ಗುರುತಿಸಿರುವುದು ಅಭಿಮಾನ ತಂದಿದೆ ಎಂದರು.

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು ಉಪಸ್ಥಿತರಿದ್ದು ಕುಲಾಲ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪ್ರತಿಭೆಗಳಿಗೆ ಜಿಲ್ಲಾ ಕುಲಾಲರ ಮಾತೃ ಸಂಘ ಸಹಕಾರ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಾಲ್ ಮಾತೃ ಸಂಘದ ಅಧ್ಯಕ್ಷರಾದ ಮಯೂರ ಉಳ್ಳಾಲ್, ಮಾಧ್ಯಮ ಕ್ಷೇತ್ರದಲ್ಲಿ ಕುಲಾಲ ಸಮಾಜದ ಬಂಧುಗಳು ಅಪಾರ ಸಂಖ್ಯೆಯಲ್ಲಿದ್ದಾರೆ . ಅವರೆಲ್ಲರ ಸೇವಾಕಾರ್ಯಗಳನ್ನು ಗುರುತಿಸುವ ಕೆಲಸ ಮುಂದಿನ ದಿನಗಳಲ್ಲಿ ಕುಲಾಲ ಸಂಘಗಳು ನಡೆಸುತ್ತದೆ. ಕುಲಾಲ ಸಮಾಜ ಬಾಂಧವರನ್ನು ಸರಕಾರ ಗುರುತಿಸಿರುವುದು ಅಭಿಮಾನ ತಂದಿದೆ, ಎಂದರು

ಈ ಸಂದರ್ಭದಲ್ಲಿ ಜಿಲ್ಲಾ ಕುಲಾಲ ಮಾತೃ ಸಂಘದ ಉಪಾಧ್ಯಕ್ಷರಾದ ಜಯಪ್ರಕಾಶ್, ಪುಂಡರೀಕಾಕ್ಷ, ಕಾರ್ಯದರ್ಶಿಸದಾಶಿವ ಕುಲಾಲ್, ಪ್ರವೀಣ್ ಬಸ್ತಿ, ಸುಕುಮಾರ್ ಬಂಟ್ವಾಳ, ದಿನೇಶ್ ಕುಲಾಲ್, ಸತೀಶ್ ಸಂಪಾಜೆ, ನವೀನ್ ಕುಲಾಲ್ , ಕಿರಣ್ ಅಟ್ಲೂರು, ಪದ್ಮನಾಭ ವೇಣೂರು, ಧರಣಿ, ಹಾಗೂ ಶೈಲೇಶ್ ನೆಟ್ಟಾರ್ ಮತ್ತು ಪ್ರಸಾದ್ ಕುಲಾಲ್ ಸಿದ್ಧಕಟ್ಟೆ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *