ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರಿಗೆ ಸೂರು ಕಟ್ಟಿಕೊಳ್ಳಲು ಎಂ.ಆರ್.ಜಿ ಗ್ರೂಪಿನ ಕೆ. ಪ್ರಕಾಶ್ ಶೆಟ್ಟಿ ಅವರಿಂದ ನೆರವು

ಮಂಗಳೂರು: ಪ್ರಖ್ಯಾತ ಪರಿಸರವಾದಿ ಹಾಗು 2019 ರ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರಿಗೆ ಸೂರು ಕಟ್ಟಿಕೊಳ್ಳಲು ಎಂ.ಆರ್.ಜಿ. ಗುಂಪಿನಿಂದ 5 ಲಕ್ಷ ರೂಪಾಯಿಗಳ ನೆರವನ್ನು ನೀಡಲಾಗಿದೆ.

. Ad Widget . Ad Widget . Ad Widget .

ಸಾಲು ಮರದ ತಿಮ್ಮಕ್ಕ ಅವರ ವೃಕ್ಷ ಪ್ರೇಮ, ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಲಾಲನೆ ಪಾಲನೆ ಮಾಡುವಲ್ಲಿ ತೋರುವ ಅರ್ಪಣಾಭಾವಕ್ಕೆ ಪರ್ಯಾಯವಾದ ಹೋಲಿಕೆ ಇಲ್ಲ. ಅವರಿಗೆ ಈ ನೆರವನ್ನು ಅತ್ಯಂತ ಗೌರವದಿಂದ ಕೊಡಮಾಡಲಾಗಿದೆ ಎಂದು ಎಂ.ಆರ್.ಜಿ. ಗುಂಪಿನ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ ಶೆಟ್ಟಿ ಹೇಳಿದ್ದಾರೆ. ನೆರವಿನ ಚೆಕ್ ಅನ್ನು ಅವರು ಸಾಲುಮರದ ತಿಮ್ಮಕ್ಕ ಅವರಿಗೆ ಹಸ್ತಾಂತರಿಸಿದರು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಯಾವುದೇ ಔಪಚಾರಿಕ ಶಿಕ್ಷಣ ಇಲ್ಲದೆಯೂ ತನ್ನ ಪರಿಸರ ರಕ್ಷಣೆಯ ಕೆಲಸಗಳಿಂದ ಸಾಲು ಮರದ ತಿಮ್ಮಕ್ಕ ಅವರು ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ ಎಂಬುದನ್ನು ಸ್ಮರಿಸಬಹುದು.

Leave a Comment

Your email address will not be published. Required fields are marked *