ಅಪ್ಪು ಹುಟ್ಟುಹಬ್ಬದಂದು ಜೇಮ್ಸ್ ಸಿನಿಮಾ ರಿಲೀಸ್ ಗೆ ಮುಹೂರ್ತ ಫಿಕ್ಸ್ ?

Ad Widget ... ..

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೊನೆಯದಾಗಿ ಅಭಿನಯಿಸಿದ್ದ ಬಹು ನಿರೀಕ್ಷಿತ ಜೇಮ್ಸ್ ಸಿನಿಮಾವನ್ನು ಅಪ್ಪು ಹುಟ್ಟುಹಬ್ಬದ ದಿನವಾದ ಮಾರ್ಚ್ 17 ರಂದೇ ಬಿಡುಗಡೆಗೊಳಿಸಲು ಎಲ್ಲರೀತಿಯ ಪ್ಲಾನ್ ಮಾಡಲಾಗುತ್ತಿದೆ.

Ad Widget

ಇನ್ನೂ ಅಪ್ಪು ಅವರು ಇಹಲೋಕ ತ್ಯಜಿಸುವ ಮುನ್ನ ಕೊನೆಯದಾಗಿ ನಟಿಸಿರುವ ಸಿನಿಮಾ ಜೇಮ್ಸ್ ಆಗಿದೆ. ಈ ಚಿತ್ರಕ್ಕೆ ನಿರ್ದೇಶಕ ಚೇತನ್ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ಮಾತಿನ ಹಂತದ ಚಿತ್ರೀಕರಣವನ್ನು ಕೂಡ ಪುನೀತ್ ಕಂಪ್ಲೀಟ್ ಮಾಡಿದ್ದಾರೆ. ಜೊತೆಗೆ ಹಾಡಿನ ಚಿತ್ರೀಕರಣಕ್ಕೆ ಪೈಲೆಟ್ ಶೂಟ್ ಕೂಡ ಮಾಡಿದ್ದ ಅಪ್ಪು, ತಮ್ಮ ಹುಟ್ಟುಹಬ್ಬದ ದಿನದಂದೇ ಸಿನಿಮಾ ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದರು ಎಂದು ತಿಳಿಸಿದ್ದಾರೆ.

ಸದ್ಯ ಜೇಮ್ಸ್ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಕೂಡ ಶುರು ಮಾಡಿತ್ತು. ಈಗಾಗಲೇ ಜೇಮ್ಸ್ ಸಿನಿಮಾದ ಚಿತ್ರೀಕರಣ ಶೇಕಡಾ 90 ರಷ್ಟು ಕಂಪ್ಲೀಟ್ ಆಗಿದ್ದು, ಕೇವಲ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಆ ಹಾಡನ್ನು ಗ್ರಾಫಿಕ್ಸ್ ಮೂಲಕ ಮಾಡಲು ನಿರ್ಧರಿಸಲಾಗಿದೆ. ಸಿನಿಮಾ ಡಬ್ಬಿಂಗ್ ಕೆಲಸ ಅರ್ಧ ಮಾಡಿದ್ದಾರೆ ಅವರ ವಾಯ್ಸ್ ಕೂಡ ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ಜೇಮ್ಸ್ ಸಿನಿಮಾಗೆ ಪುನೀತ್ ಅವರು ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದ್ದಾರೆ

Leave a Comment

Your email address will not be published. Required fields are marked *