ಬೆಂಗಳೂರು: ಕಳೆದ ಶುಕ್ರವಾರ ತೀವ್ರ ಹೃದಯಾಘಾತದಿಂದ ನಿಧನರಾದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನೆರವೇರಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ಕಾರದ ಹಲವು ಸಚಿವರು, ರಾಜಕೀಯ ಮುಖಂಡರು, ಗಣ್ಯರು, ಸಿನಿಮಾ ತಾರೆಯರು ಈ ಸಂದರ್ಭದಲ್ಲಿ ಹಾಜರಿದ್ದು ನೆಚ್ಚಿನ ನಟನಿಗೆ ಕಂಬನಿಧಾರೆಯಿಂದ ಅಂತಿಮ ವಿದಾಯ ಹೇಳಿದರು.
ಸಿಎಂ ಬೊಮ್ಮಾಯಿಯವರಂತೂ ಬಹಳ ಭಾವುಕರಾಗಿ ಪುನೀತ್ ಅವರ ಹಣೆಗೆ ಮುತ್ತಿಟ್ಟರು. ಆ ದೃಶ್ಯ ಮನಕಲಕುವಂತಿದೆ. ಈ ಸಂದರ್ಭದಲ್ಲಿ ಪುನೀತ್ ಅವರ ಪತ್ನಿ, ಪುತ್ರಿಯರು ಸೇರಿದಂತೆ ಅವರ ಕುಟುಂಬಸ್ಥರು ಹಾಜರಿದ್ದು ಅವರ ದುಃಖ ಹೇಳತೀರದಾಗಿತ್ತು.