Ad Widget .

ಪೋಪ್ ಪ್ರಾನ್ಸಿಸ್ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ| ಜಗದ್ವಿಚಾರಗಳ‌ ಬಗ್ಗೆ ಚರ್ಚೆ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವ್ಯಾಟಿಕನ್​ ಸಿಟಿ: ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲೆಂದು ಇಟಲಿ​ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವ್ಯಾಟಿಕನ್​ ನಗರದಲ್ಲಿ ಕ್ರೈಸ್ತ ಧರ್ಮದ ಪರಮೋಚ್ಛ ಗುರು ಪೋಪ್​ ಫ್ರಾನ್ಸಿಸ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Ad Widget . Ad Widget . Ad Widget .

ಕ್ಯಾಥೋಲಿಕ್​ ಚರ್ಚ್​ನ ಮುಖ್ಯಸ್ಥರಾಗಿರುವ ಪೋಪ್​ ಫ್ರಾನ್ಸಿಸ್​ ಅವರನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದು ಇದೇ ಮೊದಲು. ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿ, ಬಡತನ ನಿರ್ಮೂಲನೆ, ಉತ್ತಮ ಜೀವನ ನಿರ್ವಹಣೆ ಕುರಿತು ಪೋಪ್​ ಫ್ರಾನ್ಸಿಸ್ ಮತ್ತು ನರೇಂದ್ರ ಮೋದಿ ಇಬ್ಬರೂ ಸುಮಾರು 1 ತಾಸು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಪೋಪ್​ ಫ್ರಾನ್ಸಿಸ್ ಅವರ ಭೇಟಿ ಬಳಿಕ ಫೋಟೋಗಳನ್ನು ಟ್ವಿಟರ್​ ಹಂಚಿಕೊಂಡಿರುವ ನರೇಂದ್ರ ಮೋದಿ, ಪೋಪ್​ ಫ್ರಾನ್ಸಿಸ್​ ಅವರ ಭೇಟಿ ಅತ್ಯಂತ ಆತ್ಮೀಯವಾಗಿತ್ತು. ಅವರೊಂದಿಗೆ ಕೆಲವು ಮಹತ್ತರ ವಿಚಾರಗಳನ್ನ ಚರ್ಚಿಸಲು ಅವಕಾಶ ಸಿಕ್ಕಿತು. ಅವರನ್ನು ಭಾರತಕ್ಕೆ ಆಹ್ವಾನಿಸಲಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

Leave a Comment

Your email address will not be published. Required fields are marked *