ಮಂಗಳೂರು: ಯುವ ಜನತೆಯನ್ನು ಟಾರ್ಗೆಟ್ ಮಾಡಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಳ್ತಂಗಡಿಯ ಮಹಿಳೆ ಅರೆಸ್ಟ್

ಸಮಗ್ರ ನ್ಯೂಸ್: ಮಂಗಳೂರು ನಗರದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಿರುವ ಮಂಗಳೂರು ಉತ್ತರ ಠಾಣೆಯ ಪೊಲೀಸರು, ಆಕೆಯ ವಶದಲ್ಲಿದ್ದ ಸುಮಾರು 15.30 ಲಕ್ಷ ರೂ. ಮೌಲ್ಯದ 153 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

. Ad Widget . Ad Widget . Ad Widget

ಮೂಲತಃ ಬೆಳ್ತಂಗಡಿ ತಾಲೂಕಿನ ಗುರಿಂಗಾನ ನಿವಾಸಿ ಪ್ರಸ್ತುತ ಮಂಗಳೂರಿನ ಪಂಪ್‌ವೆಲ್ ಉಜ್ಜೋಡಿಯಲ್ಲಿ ವಾಸವಾಗಿದ್ದ ನಸೀಮಾ (42) ಬಂಧಿತ ಆರೋಪಿ.

. Ad Widget .

ಪೊಲೀಸರ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆ ವೇಳೆ ಈಕೆಯ ಪಾಲ್ಗೊಳ್ಳುವಿಕೆ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಪಂಪ್‌ವೆಲ್‌ನ ಉಜ್ಜೋಡಿ ಸಮೀಪದ ರಾಧಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ಗೆ ತೆರಳಿದ ಪೊಲೀಸರ ತಂಡಕ್ಕೆ ಸುಮಾರು 15,30,000 ರೂ. ಮೌಲ್ಯದ 153 ಗ್ರಾಂ ಎಂಡಿಎಂಎ ಮಾದಕ ವಸ್ತುಗಳು ದೊರಕಿವೆ.

ವಿಚಾರಣೆ ವೇಳೆ ನಸೀಮಾ ಮಂಗಳೂರು ನಗರದ ವಿವಿಧೆಡೆ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಾದಕ ವಸ್ತು ಪೂರೈಕೆ ಜಾಲದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿರುವ ಶಂಕೆಯಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

Leave a Comment

Your email address will not be published. Required fields are marked *