ಸಮಗ್ರ ನ್ಯೂಸ್: ಕರಾವಳಿ ಕರ್ನಾಟಕದ ಸುಳ್ಯದ ನೆಲದಲ್ಲಿ ಬೆಳೆದು, ಅಮೆರಿಕದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದ ಕಾರ್ತಿಕ್ ಸುಧೀರ್, ಇದೀಗ ಜಾಗತಿಕ ಅಲ್ಕೋ-ಬೆವ್ (Alco-Bev) ಉದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರ ತೊರೆದು ಸ್ಪಿರಿಟ್ಸ್ ಉದ್ಯಮಕ್ಕೆ ಧುಮುಕಿದ ಅವರು, 2017ರಲ್ಲಿ ಅಮೆರಿಕದಲ್ಲಿ ‘ಫಿನಾಮಿನಲ್ ಸ್ಪಿರಿಟ್ಸ್’ ಸಂಸ್ಥೆಯನ್ನು ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ನಿರ್ಮಿಸಿದ್ದಾರೆ. ಅಮೆರಿಕದ ಕೆಂಟಕಿಯಲ್ಲಿ ಡಿಸ್ಟಿಲೇಶನ್, ಬ್ಲೆಂಡಿಂಗ್ ಮತ್ತು ಕ್ಯಾಸ್ಕ್ ಮೆಚ್ಯುರೇಶನ್ ಕುರಿತು ಕಠಿಣ ಅಧ್ಯಯನ ನಡೆಸಿದ ಕಾರ್ತಿಕ್, ‘ರಾನ್ ಇಜಾಲ್ಕೊ ರಮ್’