ಐದು ಗಂಟೆಗಳ ರೈಲು ಪ್ರಯಾಣದಲ್ಲಿ ಕಿರಿಕಿರಿಗೆ ಸುಸ್ತಾದ ಸಂಸದ ತೇಜಸ್ವಿ ಸೂರ್ಯ ಪತ್ನಿ| ‘ದೇಶವನ್ನು ದೇವರೇ ಕಾಪಾಡಬೇಕು!’ ಎಂದು ಬರೆದುಕೊಂದ ಶಿವಶ್ರೀ

ಸಮಗ್ರ ನ್ಯೂಸ್: ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಹಾಗೂ ಖ್ಯಾತ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ.

. Ad Widget . Ad Widget . Ad Widget

ಗುರುವಾರ ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಶಿವಶ್ರೀ, ತಮ್ಮ 5 ಗಂಟೆಗಳ ರೈಲು ಪ್ರಯಾಣದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

. Ad Widget .

56 ಆಸನಗಳಿದ್ದ ಕೋಚ್‍ನಲ್ಲಿ ಸುಮಾರು 40 ಮಂದಿ ಮಧ್ಯವಯಸ್ಕ ಪುರುಷರ ಗುಂಪೊಂದು ಐದು ಗಂಟೆಗಳ ಕಾಲ ನಿರಂತರವಾಗಿ ಗದ್ದಲ ಮಾಡಿದೆ. ಜೋರಾಗಿ ಮಾತನಾಡುವುದು, ನಗುವುದು, ಉನೊ ಆಟವಾಡುವುದು ಹಾಗೂ ಹಾಡುಗಳನ್ನು ಹಾಡುವ ಮೂಲಕ ತಮಗೆ ತೀವ್ರ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಗದ್ದಲವನ್ನು ಸಹಿಸಲಾಗದೆ ಟಿಟಿಇ ಅವರಿಗೆ ದೂರು ನೀಡಿ, ಬೇರೆ ಕೋಚ್‍ಗೆ ಸ್ಥಳಾಂತರಿಸುವಂತೆ ಮನವಿ ಮಾಡಿದರೂ, ಆಸನ ಲಭ್ಯವಿಲ್ಲದ ಕಾರಣ ಅದು ಸಾಧ್ಯವಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕನಿಷ್ಠ ನಾಗರಿಕ ಪ್ರಜ್ಞೆಯೂ ಇಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕೊನೆಯಲ್ಲಿ ‘ದೇವರೇ ಈ ದೇಶವನ್ನು ಕಾಪಾಡಬೇಕು’ ಎಂದು ಅವರು ಬರೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *