July 2026

ರಾಜ್ಯದಲ್ಲಿ ‌ಮತ್ತೆ ಚುರುಕಾದ ಮುಂಗಾರು| ಏಳು ದಿನಗಳವರೆಗೆ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಪುಷ್ಯ ಮಳೆ ಚುರುಕಾಗಿದ್ದು, ರಾಜ್ಯದ ಬಹುತೇಕ ಕಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಹುತೇಕ ಜಿಲ್ಲೆಗಳಲ್ಲಿ ಬಿರುಗಾಳಿ ಸಮೇತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದರೆ, ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲೂ ಕೆಲವೆಡೆ ಸಾಧಾರಣ ಮಳೆ ಜೊತೆಗೆ ಜೋರಾದ ಗಾಳಿ ಮುನ್ಸೂಚನೆ ನೀಡಲಾಗಿದೆ. ಇನ್ನು, […]

ರಾಜ್ಯದಲ್ಲಿ ‌ಮತ್ತೆ ಚುರುಕಾದ ಮುಂಗಾರು| ಏಳು ದಿನಗಳವರೆಗೆ ಮಳೆ ಸಾಧ್ಯತೆ Read More »

“ಮಕ್ಕಳನ್ನು ಪ್ರಚೋದಿಸಬೇಡಿ, ಸರಿಯಾದ ದಾರಿ‌ ತೋರಿಸಿ”| ಎನ್ ಡಿಎ ಸಂಸದರಿಗೆ ಪ್ರಧಾನಿ ಕಿವಿಮಾತು

ಸಮಗ್ರ ನ್ಯೂಸ್: ನೀಟ್-ಯುಜಿ (NEET-UG) 2026 ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ದೆಹಲಿಯಲ್ಲಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರೀಯತಾವಾದಿ ಜನತಾಂತ್ರಿಕ ಮೈತ್ರಿ (NDA) ಸಂಸದರಿಗೆ ‘ಮಕ್ಕಳನ್ನು ಪ್ರಚೋದಿಸಬೇಡಿ, ಅವರಿಗೆ ಸರಿಯಾದ ದಾರಿ ತೋರಿಸಿ’ ಎಂದು ಕರೆ ನೀಡಿದರು. ನೀಟ್-ಯುಜಿ (NEET-UG) 2026 ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ದೆಹಲಿಯಲ್ಲಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಸಂಸದರೊಂದಿಗೆ ಮಹತ್ವದ ಸಂದೇಶ ಹಂಚಿಕೊಂಡಿದ್ದಾರೆ. ಸಂಸತ್ತಿನ

“ಮಕ್ಕಳನ್ನು ಪ್ರಚೋದಿಸಬೇಡಿ, ಸರಿಯಾದ ದಾರಿ‌ ತೋರಿಸಿ”| ಎನ್ ಡಿಎ ಸಂಸದರಿಗೆ ಪ್ರಧಾನಿ ಕಿವಿಮಾತು Read More »

ಹಸೆಮಣೆ ಏರಬೇಕಾಗಿದ್ದ ಯುವಕ ರಷ್ಯಾ‌ ದಾಳಿಗೆ ಬಲಿ| ಕಡಲಲ್ಲೇ ಹೆಣವಾದ ಕಾಸರಗೋಡಿನ ನಾವಿಕ

ಸಮಗ್ರ ನ್ಯೂಸ್: ಉಕ್ರೇನ್‌ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ರಷ್ಯಾದ ದಾಳಿಯಲ್ಲಿ ಕೇರಳ ಮೂಲದ ಯುವ ನಾವಿಕ ಅಖಿಲ್ ಜೋಯನ್ (26) ಸೇರಿದಂತೆ ನಾಲ್ವರು ಭಾರತೀಯರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ವೆಳ್ಳರಿಕ್ಕುಂಡು ನಿವಾಸಿಯಾಗಿರುವ ಅಖಿಲ್, ಇನ್ನೆರಡು ತಿಂಗಳಲ್ಲಿ ಮದುವೆಯಾಗಲು ತಯಾರಿ ನಡೆಸುತ್ತಿದ್ದರು. ಆದಾಗ್ಯೂ, ಮಗನ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಇದೀಗ ಆತನ ಸಾವು ಚೇತರಿಸಿಕೊಳ್ಳಲಾಗದಷ್ಟು ದೊಡ್ಡ ಆಘಾತ ನೀಡಿದೆ. ಉಕ್ರೇನ್‌ನ ಒಡೆಸಾ ಬಂದರಿನಿಂದ ಯೂಕ್ರೇನಿಯನ್ ಜೋಳವನ್ನು ಹೊತ್ತು ಸಾಗುತ್ತಿದ್ದ ಎಮ್‌ವಿ ಗೋಲ್ಡನ್ ಲಿಯೋ ಎಂಬ ಸರಕು

ಹಸೆಮಣೆ ಏರಬೇಕಾಗಿದ್ದ ಯುವಕ ರಷ್ಯಾ‌ ದಾಳಿಗೆ ಬಲಿ| ಕಡಲಲ್ಲೇ ಹೆಣವಾದ ಕಾಸರಗೋಡಿನ ನಾವಿಕ Read More »

ಬೆಳ್ತಂಗಡಿ: ಅಪ್ರಾಪ್ತೆಗೆ ಗರ್ಭದಾನ| ಆರೋಪಿಗೆ ನ್ಯಾಯಾಂಗ ಬಂಧನ

ಸಮಗ್ರ ನ್ಯೂಸ್: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಅತ್ಯಾಚಾರ ಎಸಗಿದ ಪರಿಣಾಮ ಬಾಲಕಿ ಗರ್ಭಿಣಿಯಾಗಿರುವ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ರಿಕ್ಷಾ ಚಾಲಕನನ್ನು ಬೆಳ್ತಂಗಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿ ಮೂಲದ ಆಟೋ ರಿಕ್ಷಾ ಚಾಲಕ ಶುಭರಾಜ್ (28) ಬಂಧಿತ ಆರೋಪಿ. ಅಪ್ರಾಪ್ತ ವಿದ್ಯಾರ್ಥಿನಿಯನ್ನು ಈತ ಪರಿಚಯ ಮಾಡಿಕೊಂಡು, ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೆ ಈ ವಿಷಯವನ್ನು ಯಾರ ಬಳಿಯೂ ಹೇಳದಂತೆ ಬಾಲಕಿಗೆ ಬೆದರಿಕೆಯೊಡ್ಡಿದ್ದ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ

ಬೆಳ್ತಂಗಡಿ: ಅಪ್ರಾಪ್ತೆಗೆ ಗರ್ಭದಾನ| ಆರೋಪಿಗೆ ನ್ಯಾಯಾಂಗ ಬಂಧನ Read More »

ಕರಾವಳಿ, ಒಳನಾಡಿನಲ್ಲಿ ಸಾಧಾರಣ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕದ ವಿವಿಧ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯ ವಾತಾವರಣ ಮುಂದುವರಿಯಲಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಬಹುತೇಕ ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು,

ಕರಾವಳಿ, ಒಳನಾಡಿನಲ್ಲಿ ಸಾಧಾರಣ ಮಳೆ ಮುನ್ಸೂಚನೆ Read More »

ಕಾಕ್ರೋಚ್ ದೆಹಲಿ ದಂಗೆ| ನಿನ್ನೆ ಏನೇನಾಯ್ತು? ಫುಲ್ ಡೀಟೈಲ್ಸ್ ನೋಡಿ…

ಸಮಗ್ರ ನ್ಯೂಸ್: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಶಿಕ್ಷಣ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸೋಮವಾರ ಆಯೋಜಿಸಿದ್ದ ‘ಸಂಸದ್ ಚಲೋ’ ಪ್ರತಿಭಟನೆಯು ಆರಂಭದಲ್ಲಿ ಶಾಂತಿಯುತವಾಗಿ ನಡೆದರೂ, ನಂತರದಲ್ಲಿ ಹಿಂಸಾಚಾರಕ್ಕೆ ತಿರುಗಿತು. ಕೆಲವು ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಕೆಲವು ಪ್ರತಿಭಟನಾಕಾರರಿಗೂ ಗಾಯಗಳಾಗಿವೆ. ಘರ್ಷಣೆ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಮಂದಿಯನ್ನು

ಕಾಕ್ರೋಚ್ ದೆಹಲಿ ದಂಗೆ| ನಿನ್ನೆ ಏನೇನಾಯ್ತು? ಫುಲ್ ಡೀಟೈಲ್ಸ್ ನೋಡಿ… Read More »

ಸುಳ್ಯದ ಸಂಪಾಜೆಯಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು| ಗಂಡ ಹಾಗೂ ಮನಯವರ ವಿರುದ್ಧ ದೂರು ದಾಖಲು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ‌ ಸಂಪಾಜೆ‌ ಸಮೀಪದ ಕಡೆಪಾಲದಲ್ಲಿ ನಡೆದ 22 ವರ್ಷದ ಯುವತಿಯ ಅನುಮಾನಾಸ್ಪದ ಸಾವು ಇದೀಗ ಭಾರಿ ಕುತೂಹಲ ಹಾಗೂ ಅನುಮಾನಗಳಿಗೆ ಕಾರಣವಾಗಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕಳಿಸಿದ್ದಾರೆ. ಕಡೆಪಾಲ ಅಲಿಗುಡ್ಡೆಯ ನಿವಾಸಿ ಅಲವಿಕುಟ್ಟಿ ಎಂಬವರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅನ್ಸಾರ್ ಎಂಬವರ ಪತ್ನಿ ಫಾತಿಮತ್ ನಿಶಾನ(22) ಮೃತಪಟ್ಟ ಮಹಿಳೆ. ಮೃತದೇಹವನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತರಲಾಗಿತ್ತು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜುಲೈ

ಸುಳ್ಯದ ಸಂಪಾಜೆಯಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು| ಗಂಡ ಹಾಗೂ ಮನಯವರ ವಿರುದ್ಧ ದೂರು ದಾಖಲು Read More »

ಇಂದಿನಿಂದ ಕೇಂದ್ರ ಮುಂಗಾರು ಅಧಿವೇಶನ| ಪ್ರಮುಖ ಮಸೂದೆಗಳ ಮಂಡನೆಗೆ ಸಿದ್ಧತೆ| ಸರ್ಕಾರದ ತರಾಟೆಗೆ ವಿರೋಧ ಪಕ್ಷಗಳಿಂದ ವ್ಯೂಹ

ಸಮಗ್ರ ನ್ಯೂಸ್: ಸಂಸತ್ತಿನ ಮುಂಗಾರು ಅಧಿವೇಶನವು ಇಂದಿನಿಂದ (ಜು.20) ಆರಂಭವಾಗುತ್ತಿದ್ದು, ಈ ಬಾರಿಯ ರಾಜಕೀಯ ಲೆಕ್ಕಾಚಾರಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಒಂದೆಡೆ ಕೇಂದ್ರ ಸರ್ಕಾರವು ಕೆಲವು ಪ್ರಮುಖ ಕಾನೂನುಗಳನ್ನು ಜಾರಿಗೆ ತರಲು ಮಸೂದೆಗಳನ್ನು ಮಂಡಿಸಲು ಸಿದ್ಧತೆ ನಡೆಸಿದ್ದರೆ, ಇನ್ನೊಂದೆಡೆ ಪ್ರತಿಪಕ್ಷಗಳು ಹತ್ತಾರು ಪ್ರಮುಖ ಜನಪರ ಹಾಗೂ ವಿವಾದಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವ್ಯೂಹ ರಚಿಸಿವೆ. ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ 6 ಪ್ರಮುಖ ಮಸೂದೆಗಳಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆ (FCRA) ಮತ್ತು ಆದಾಯ ತೆರಿಗೆ

ಇಂದಿನಿಂದ ಕೇಂದ್ರ ಮುಂಗಾರು ಅಧಿವೇಶನ| ಪ್ರಮುಖ ಮಸೂದೆಗಳ ಮಂಡನೆಗೆ ಸಿದ್ಧತೆ| ಸರ್ಕಾರದ ತರಾಟೆಗೆ ವಿರೋಧ ಪಕ್ಷಗಳಿಂದ ವ್ಯೂಹ Read More »

ಫಿಫಾ‌ ವಿಶ್ವಕಪ್| ಅರ್ಜೆಂಟೀನಾ ಮಣಿಸಿ ‌ಕಪ್ ಗೆದ್ದ ಸ್ಪೇನ್

ಸಮಗ್ರ ನ್ಯೂಸ್: ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆದ ರೋಮಾಂಚಕ ಫಿಫಾ ವಿಶ್ವಕಪ್ 2026ರ (FIFA 2026) ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿದ ಸ್ಪೇನ್ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಮಹಾ ಕಾದಾಟದಲ್ಲಿ ಸ್ಪೇನ್ 1-0 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ಹಾಲಿ ಚಾಂಪಿಯನ್ ಅರ್ಜೆಂಟೀನಾದ ಸತತ ಎರಡನೇ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿದ್ದು, ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಸೇರಿದಂತೆ ಇಡೀ ಅರ್ಜೆಂಟೀನಾ ತಂಡ ಕಣ್ಣೀರಿನಲ್ಲಿ

ಫಿಫಾ‌ ವಿಶ್ವಕಪ್| ಅರ್ಜೆಂಟೀನಾ ಮಣಿಸಿ ‌ಕಪ್ ಗೆದ್ದ ಸ್ಪೇನ್ Read More »

ರಾಜ್ಯದಲ್ಲಿ ಶೇ.60ರಷ್ಟು ಮಳೆ‌ ಕೊರತೆ| 15‌ ದಿನಗಳೊಳಗೆ ವರದಿ ಸಲ್ಲಿಸಲು ಸಿಎಂ ಆದೇಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮಳೆ ಕೊರತೆ, ಬರ ಪರಿಸ್ಥಿತಿ ಕುರಿತು ಮುಂದಿನ 15 ದಿನಗಳಲ್ಲಿ ಕೇಂದ್ರಕ್ಕೆ ಸಲ್ಲಿಸಲು ಸಮರ್ಪಕ ವರದಿ ಸಿದ್ಧಪಡಿಸಿ. ಸ್ಥಳ ಪರಿಶೀಲನೆ ಮಾಡಿ ವರದಿ ರೂಪಿಸಬೇಕು, ಕಚೇರಿಯಲ್ಲಿ ಕೂತು ತಯಾರಿಸಬಾರದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿಧಾನಸೌಧದಲ್ಲಿ ಬರ ಪರಿಸ್ಥಿತಿ ಕುರಿತ ಜಿಲ್ಲಾಧಿಕಾರಿ ಹಾಗೂ ಸಿಇಒ ಸಭೆ ಹಾಗೂ ವಿಶೇಷ ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಭಾನುವಾರ ಮಾತನಾಡಿದರು. “ನಮ್ಮ

ರಾಜ್ಯದಲ್ಲಿ ಶೇ.60ರಷ್ಟು ಮಳೆ‌ ಕೊರತೆ| 15‌ ದಿನಗಳೊಳಗೆ ವರದಿ ಸಲ್ಲಿಸಲು ಸಿಎಂ ಆದೇಶ Read More »