ಕನಕಪುರದಲ್ಲಿ ಹೊಸ ದಾಳ ಉರುಳಿಸಿದ ಸಿಎಂ ಡಿಕೆಶಿ| ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೆ ಬಿಗ್ ಆಫರ್

ಸಮಗ್ರ ನ್ಯೂಸ್: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು, ಹಳೇ ಮೈಸೂರು ಭಾಗದ ರಾಜಕಾರಣದಲ್ಲಿ ಸಂಚಲನ ಮೂಡಿಸಬಲ್ಲ ದಾಳ ಉರುಳಿಸಿದ್ದಾರೆ.

Ad Widget ... .. Ad Widget .

ಕನಕಪುರದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ತಮ್ಮ ರಾಜಕೀಯ ಭವಿಷ್ಯ ಹಾಗೂ ಹಳೇ ಮೈಸೂರು ಭಾಗದ ನಾಯಕತ್ವದ ಕುರಿತು ಅತ್ಯಂತ ಮಹತ್ವದ ಹೇಳಿಕೆ ನೀಡಿದ್ದಾರೆ.

Ad Widget

ನೂತನ ಸಿಎಂ ಜನರನ್ನುದ್ದೇಶಿಸಿ, ನಾನು ಇಡೀ ರಾಜ್ಯ ಸುತ್ತಬೇಕಿದೆ. ನಿಮಗೆ ಹೆಚ್ಚು ಸಮಯ ಕೊಡಲು ಆಗಲ್ಲ. 2028ಕ್ಕೂ ನಾನು ಬರಬೇಕು ತಾನೇ? ಬರಿ ಎರಡು ವರ್ಷದ ಮುಖ್ಯಮಂತ್ರಿ ನೋಡಬೇಕಾ? 2028ಕ್ಕೂ ನಾನೇ ಬರಬೇಕು ಅಂದ್ರೆ ನನಗೆ ಬಿಡುವು ಮಾಡಬೇಕು. ಎಲ್ಲೆಡೆ ಕನಕಪುರ ಅಂದ್ರೆ ಸಿಎಂ ಕ್ಷೇತ್ರ ಅಂತಾರೆ. ಆ ಅಧಿಕಾರ ಕೊಟ್ಟಿದ್ದು ನೀವು. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ. ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಮಗನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಈ ದೇಶದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅವರು ಮತ್ತೊಬ್ಬ ಡಿ.ಕೆ.ಶಿವಕುಮಾರ್ ಅವರನ್ನು ತಯಾರು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಗೆ ಬಹಿರಂಗ ಆಹ್ವಾನ
ಇದೇ ವೇದಿಕೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಾಳಯಕ್ಕೆ ಆಘಾತ ನೀಡಿದ ಸಿಎಂ ಡಿಕೆಶಿ, ವಿರೋಧ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರನ್ನು ಬಹಿರಂಗವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು. ಯಾರು ಜಗಳವಾಡಬೇಡಿ. ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗದಂತೆ ನಡೆದುಕೊಳ್ಳಿ. ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಿಗೂ ನನ್ನ ಮನೆ ಮತ್ತು ನನ್ನ ಹೃದಯ ತೆರೆದಿದೆ ಎಂದು ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದರು. ಡಿಕೆ ಶಿವಕುಮಾರ್ ಹೇಳಿದ ಈ ಮಾತು ರಾಜಕೀಯದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದೆ.

Leave a Comment

Your email address will not be published. Required fields are marked *