ಸಮಗ್ರ ನ್ಯೂಸ್: ದಿನನಿತ್ಯದ ಜೀವನದಲ್ಲಿ ರಾಶಿಗಳು ನಮ್ಮನ್ನು ಪ್ರಭಾವಿಸುತ್ತವೆ. ಈ ವಾರ ಯಾವ ರಾಶಿಗಳಿಗೆ ಶುಭ? ಯಾರಿಗೆ ಲಾಭ? ದೋಷ ಪರಿಹಾರವೇನು? ಎಂಬುದನ್ನು ತಿಳಿಯೋಣ ಬನ್ನಿ…
ಮೇಷ: ಗಜಕೇಸರಿ ಯೋಗ ಉಂಟಾಗಿ ಈ ವರ್ಷದ ಜೂ. 27ರವರೆಗೆ ನಡೆಯುತ್ತದೆ. ಸದಾವಕಾಶ ಸದ್ಭುದ್ಧಿ, ದೇವರ ಪ್ರಾರ್ಥನೆ, ಸ್ವಶಕ್ತಿಯಿಂದ ಅನುಕೂಲ, ಸಾಮರ್ಥ್ಯ, ಬುದ್ಧಿವಂತಿಕೆಯಿಂದ ಏನನ್ನು ಬೇಕಾದರೂ ಗಳಿಸಬಹುದು. ಹವಾಮಾನ ವೈಪರೀತ್ಯ ದಿಂದ ಶರೀರಕ್ಕೆ ಉಷ್ಣ ಜ್ವರಾದಿ ಕೆಮ್ಮು, ಕಫ ಉಂಟಾಗಬಹುದು, ಎಚ್ಚರಿಕೆ ವಹಿಸಿ.
ವೃಷಭ: ಶಾಸ್ತ್ರ ಲಿಖಿತದಲ್ಲಿ ಬೇಕಾದಷ್ಟು ಯೋಗ ಬರೆದಿರುತ್ತಾರೆ. ಕಾರ್ಯಸಿದ್ಧಿಯಾಗುವ ಯೋಗಗಳಿಂದ ಹಿಡಿದು ಎಲ್ಲವನ್ನೂ ನಮೂದಿಸಿರುತ್ತಾರೆ. ಕಳೆದ ಐದು ದಿನಗಳಿಂದ ಗೊಂದಲವು ಪ್ರಾರಂಭವಾಗಿದ್ದು, ಕಾಮಧೇನುವಿನ ಗಂಜಲವನ್ನು ಮನೆಯನ್ನು ಶುದ್ಧೀಕರಿಸಲು ಬಳಸುವಂತೆ ತೊಳೆದ ಅಕ್ಕಿ, ಬೆಲ್ಲ, ಬಾಳೇಹಣ್ಣು, ಬಿಳಿವಸ್ತ್ರವನ್ನು ಕೊಟ್ಟು ಯೋಗವನ್ನು ಅನುಭವಿಸಲು ಸನ್ನದ್ಧರಾಗಿ, ದುರ್ಗೆಯ ಪ್ರಾರ್ಥನೆ ಇರಲಿ.
ಮಿಥುನ:
ಮಿಥುನ ರಾಶಿಗೆ ದ್ವಿತೀಯದಲ್ಲಿ ಗುರುವಿದ್ದು, ದಶಮದಲ್ಲಿ ಶನಿಯಿದ್ದಾನೆ, ಗುರುಬಲ ಉಂಟಾಗಿ ಶನಿಯಿಂದ ಯಾವ ಅನಾನುಕೂಲವಾಗದು. ಕಟಕ ರಾಶಿ ಗುರುವಿಗೆ ಉಚ್ಛ ರಾಶಿಯಾಗಿದ್ದು, ಭೂಮಿಯಿಂದ ಹಿಡಿದು ಆಕಾಶದವರೆಗೂ ಯಾವ ಕಾರ್ಯದಲ್ಲಿ ತೊಡಗಿಸಿಕೊಂಡರೂ ಶುಭಕಾರ್ಯವನ್ನು ಮಾಡಬಹುದು. ಸನ್ಮಾರ್ಗದಲ್ಲಿ ನಡೆದರೆ ಎಲ್ಲವನ್ನೂ ಗಳಿಸಿ ಮನೆಯಲ್ಲಿ ಸಂತೋಷವನ್ನು ಪಡುವ ಕಾಲ.
ಕಟಕ:
ಜನ್ಮ ಗುರು ನಿಮ್ಮ ರಕ್ಷಣೆ ಮಾಡುತ್ತಾನೆ. ಶರೀರವನ್ನು ಕಾಪಾಡಿಕೊಳ್ಳಲು ಹಿತಮಿತ ಮಾತು, ಒಳ್ಳೆಯ ನಿದ್ರೆ, ಶುಭಕಾರ್ಯಗಳಿಗೆ ಧನ ವ್ಯಯ ಎಲ್ಲವನ್ನು ಈಶ್ವರನೇ ನಡೆಸಿಕೊಡುತ್ತಾನೆ. ಗುರುವಾರದಂದು ಒಪ್ಪತ್ತು ಊಟ ಮಾಡಿ ಈಶ್ವರನನ್ನು ದರ್ಶನ ಮಾಡಿದರೆ ಸೆಪ್ಟೆಂಬರ್ 2025ವರೆಗೂ ಎಲ್ಲವೂ ದ್ವಿಗುಣವಾಗುವ ಸಮಯ.
ಸಿಂಹ:
ದ್ವಾದಶ ಗುರು ಅಷ್ಟಮ ಶನಿ, ಗ್ರಹಸ್ಥಿತಿಯ ಮುನ್ನೋಟ ಚೆನ್ನಾಗಿ ಕಾಣದಿದ್ದರೂ 12ರ ಗುರು ಉಚ್ಛ ರಾಶಿಗೆ ಬಂದಾಗ ಯಾರಿಗೂ ತೊಂದರೆ ಕೊಡನು. ಸಿಂಹದ ಗಾಂಭೀರ್ಯದಲ್ಲಿ ನಡೆಯಿರಿ. ನಿಮ್ಮ ದಾರಿಯುದ್ದಕ್ಕೂ ಸುಗುಮವಾಗುವುದು. ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿದರೆ ಕಾರ್ಯಾನುಕೂಲವಾಗುವುದು.
ಕನ್ಯಾ:
ಕನ್ಯಾ ರಾಶಿಗೆ ಏಕಾದಶದಲ್ಲಿ ಗುರುವಿದ್ದರೂ, ಶನಿಯು ಸಪ್ತಮದಲ್ಲಿ ಇರುವುದರಿಂದ ಕಲಹಗಳು, ದ್ವೇಷಗಳು ಬಂದರೂ ಅದನ್ನು ತಡೆಯಲು ಗುರುವಿದ್ದು, ಒಳ್ಳೆಯ ಕೆಲಸದಲ್ಲಿ ತೊಡಗಿಕೊಂಡರೆ ಶುಭವೂ, ವೃದ್ಧಿಯೂ ಆಗುವುದು, ಮಹಾರುದ್ರ, ಮಹಾವಿಷ್ಣುವನ್ನು ಪೂಜಿಸಲೇಬೇಕು.
ತುಲಾ:
ಉಚ್ಚ ರಾಶಿಯಲ್ಲಿ ದಶಮ ಸ್ಥಾನಕ್ಕೆ ಗುರುವು ಬಂದಿದ್ದು, ದಾರಿದ್ರ ್ಯ ದುಃಖವಿಲ್ಲದ ಜೀವನವನ್ನು ಪಡೆಯಲು ಸಧರ್ಮಂ ಶ್ರೇಯ ಎಂಬಂತೆ ನಿಮ್ಮ ಧರ್ಮವನ್ನು ಪಾಲಿಸಿ ಗುರುಪೂಜೆಯನ್ನು ಮಾಡಿ ಜನರಿಗೆ ಕೈಲಾದಷ್ಟು ಊಟವನ್ನು ಹಾಕಿ. ಆ ಪುಣ್ಯವು ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ- ಹಾಗೂ ಜೀವನದಲ್ಲಿ ಸುಖ- ನೆಮ್ಮದಿಯನ್ನು ತಂದುಕೊಡುತ್ತದೆ.
ವೃಶ್ಚಿಕ:
ನವಮ ಸ್ಥಾನಕ್ಕೆ ಗುರುವು ಬಂದು ಇಷ್ಟಾರ್ಥ ಸಿದ್ದಿಸುತ್ತಾನೆ. ಕಷ್ಟಗಳು ಕಳೆದು ಸುಖದ ಛಾಯೆಯಲ್ಲಿ ಕೊಂಡೊಯ್ದು ನಿಮ್ಮ ನಿರೀಕ್ಷೆಯನ್ನು ಮೀರಿ ಕೆಲಸ -ಕಾಯದಲ್ಲಿ ಧನ ಸಂಪತ್ತು ಗುರು ಕೃಪೆಯಿಂದ ಬಂದು ಸೇರುತ್ತದೆ. ಪಂಚಮ ಶನಿಗೆ ಪ್ರಾರ್ಥನೆ ಪೂಜೆ, ತಿಲಾದಾನ ಮಾಡಿ.ಧನಸ್ಸು: ದೈವ ಮಾರ್ಗದಲ್ಲಿ ನಡೆದು ಭಗವಂತ ಪ್ರಾರ್ಥನೆಯಿದ್ದರೆ ಕೆಲಸವು ನಿಮ್ಮಂತೆ ನಡೆಯುತ್ತದೆ. ದೈವಂ ಮಾನಸ ರೂಪೇಣ ಎಂಬಂತೆ ಯಾವುದೋ ರೂಪದಲ್ಲಿ ಬಂದು ದೇವರು ಅನುಕೂಲ ಮಾಡಿಕೊಟ್ಟು ನಿಮ್ಮನ್ನು ನಡೆಸುತ್ತಾನೆ. ಗುರು ಅಷ್ಟಮದಿಂದ ಮುಂದೆ ಸಾಗಿದರೆ ಜೀವನದಲ್ಲಿ ಪರಿವರ್ತನೆಯು ಉಂಟಾಗುತ್ತದೆ.
ಮಕರ:
ಸಪ್ತಮದಲ್ಲಿ ಗುರು, 3ರಲ್ಲಿ ಶನಿ ಇದ್ದಾರೆ. ಸುಖಸ್ಥಾನದಲ್ಲಿ ಗುರುವಿದ್ದು, ಉಚ್ಛನಾಗಿರುವುದರಿಂದ ನಿಮಗೆ ಈ ಮಾಸದಲ್ಲಿ ಇನ್ನೂ ದಿನಗಳು ಬಾಕಿಯಿದ್ದು, ಸಿದ್ದಿಯನ್ನು ಪಡೆದು ಸುಪ್ರ್ತಸಿದ್ಧಿಯಾಗಲು ದತ್ತಾತ್ರೇಯನ ಅನುಗ್ರಹ ಬೇಕು. ಗುರುದರ್ಶನ ಮಾಡಿ ಬನ್ನಿ. ಶುಭವಾಗುತ್ತದೆ.
ಕುಂಭ:
ಕುಂಭ ರಾಶಿಯವರಿಗೆ ಯಾವ ಮೂನ್ಸೂಚನೆಯಿಲ್ಲದೆ ದೇವರು ಕೊಡುವುದೆಲ್ಲವನ್ನು ಕೊಟ್ಟು ನಿಮ್ಮ ಬಾಳನ್ನು ಹಸನು ಮಾಡುತ್ತಾನೆ. 6ರ ಗುರು ಕಟಕ ರಾಶಿಯಲ್ಲಿ ಉಚ್ಚನಾಗಿರುವುದರಿಂದ ಋಣಭಾರವನ್ನು ಇಳಿಸಲು ಪ್ರಾರ್ಥನೆ ಬೇಕೇ ಬೇಕು. ಯಾವ ರೊಗ ತಗುಲದಂತೆ ನೊಡಿಕೊಳ್ಳಲು ವೈದ್ಯನಾಥೇಶ್ವರನ ಅನುಗ್ರಹವೂ ಬೇಕು. ತಂದೆ ತಾಯಿಗೆ ಪ್ರತಿ ನಿತ್ಯ ನಮಸ್ಕರಿಸಿ ಆಶೀರ್ವಾದ ಪಡೆಯಿರಿ.
ಮೀನ:
ಮೀನ ರಾಶಿಗೆ ಪಂಚಮದಲ್ಲಿ ಗುರು, ಶನಿ ಲಗ್ನದಲ್ಲೇ ಇದ್ದಾನೆ. ಪಾಪ ಗ್ರಹದ ದೃಷ್ಟಿಯು ಐದನೇ ಮನೆಯ ಮೇಲಿದ್ದರೂ, ಎಲ್ಲವನ್ನೂ ಗುರುವು ಕೊಟ್ಟು , ಕೊಟ್ಟ ಕಾರ್ಯದಲ್ಲಿ ಯಶಸ್ಸು ಕಾಣುವಿರೇ ಎಂದು ಪರೀಕ್ಷಿಸುತ್ತಾನೆ. ಇವೆಲ್ಲವೂ ದುರ್ಗಾ ಮಹಾಲಕ್ಷ್ಮೀಯಿಂದಲೇ ಪ್ರಾಪ್ತವಾಗಿರುವುದು, ಸುಂದರ ಕಾಂಡದ ಮೂರನೇ ಅಧ್ಯಾಯ ಪಾರಾಯಣ ಮಾಡಿ. ಸಂಪಾದಿಸಿದ್ದು ದಕ್ಕಲು ಪಾರ್ವತಿ- ಸಹಿತ ಸಾಂಬಸದಾಶಿವನನ್ನು ಪ್ರಾರ್ಥಿಸಿ.








