ಪೆಟ್ರೋಲ್‌, ಡೀಸೆಲ್‌ ಬಳಿಕ  CNG ಬೆಲೆ ಏರಿಕೆ 

ನವದೆಹಲಿ: ಪೆಟ್ರೋಲ್‌, ಡೀಸೆಲ್‌ (Petrol, Diesel) ಬಳಿಕ ಇದೀಗ ದೆಹಲಿಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರುವಂತೆ ಸಂಕುಚಿತ ನೈಸರ್ಗಿಕ ಅನಿಲ (CNG) ಬೆಲೆಯನ್ನು 2 ರೂ. ಗಳಷ್ಟು ಹೆಚ್ಚಿಸಲಾಗಿದೆ.

. Ad Widget . Ad Widget . Ad Widget .

ಹೊಸ ಬೆಲೆಯ ಅನ್ವಯ ದೆಹಲಿಯಲ್ಲಿ ಪ್ರತಿ ಕೆಜಿ ಸಿಎನ್‌ಜಿ ಬೆಲೆ 8.09 ರೂ.ಗಳಿಗೆ ತಲುಪಿದೆ. ಜಾಗತಿಕ ಮತ್ತು ತೈಲ ಬಿಕ್ಕಟ್ಟಿನಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ನಡುವೆಯೇ ಸಿಎನ್‌ಜಿ ಬೆಲೆ ಹೆಚ್ಚಳ ಕಂಡುಬಂದಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಇತ್ತೀಚಿನ ದಿನಗಳಲ್ಲಿ ಸಿಎನ್‌ಜಿ ಬೆಲೆಗಳನ್ನು ಎರಡು ಬಾರಿ ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ, ಕಳೆದ 12 ದಿನಗಳಲ್ಲಿ ಪ್ರತಿ ಕೆಜಿಗೆ 6 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಒಟ್ಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಿಕ ಸಿಎನ್‌ಜಿ ಈಗ ಸಾಮಾನ್ಯ ಜನರ ಜೇಬಿನ ಕತ್ತರಿ ಹಾಕುತ್ತಿದೆ.


ಸಿಎನ್‌ಜಿ ಬೆಲೆ ಹೆಚ್ಚಳವು ದೆಹಲಿಯಲ್ಲಿ ವಾಣಿಜ್ಯ ವಾಹನ ಚಾಲಕರಿಗೆ ಹೆಚ್ಚು ಹೊರೆಯಾಗಲಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಆಟೋಗಳು, ಟ್ಯಾಕ್ಸಿಗಳು, ಶಾಲಾ ವ್ಯಾನ್‌ಗಳು ಮತ್ತು ಖಾಸಗಿ ಕಾರುಗಳು ಸಿಎನ್‌ಜಿಯ ಸಾಮಾನ್ಯ ಬಳಕೆದಾರರಾಗಿದ್ದಾರೆ. ಈ ಬೆಲೆ ಏರಿಕೆಯೂ ಈ ವರ್ಗದ ಚಾಲಕರಿಗೆ ಹೆಚ್ಚು ಆರ್ಥಿಕ ಹೊರೆ ನೀಡಲಿದೆ. ಅಲ್ಲದೇ ಸಿಎನ್‌ಜಿ ಬೆಲೆ ಏರಿಕೆಯು ಮುಂಬರುವ ದಿನಗಳಲ್ಲಿ ಪ್ರಯಾಣ ಮತ್ತು ಸರಕು ಸಾಗಣೆ ದರಗಳನ್ನ ಹೆಚ್ಚಿಸಲು ಕಾರಣವಾಗಬಹುದ. 

Leave a Comment

Your email address will not be published. Required fields are marked *