ಸಮಗ್ರ ನ್ಯೂಸ್: ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಎಂಕೆ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಮುಖ್ಯಮಂತ್ರಿ ಜೊಸೆಫ್ ವಿಜಯ್‌ಗೆ ವಿಶ್ವಾಸಮತ ಪರೀಕ್ಷೆ ಎದುರಾಗಿತ್ತು. ಸರ್ಕಾರ ರಚಿಸಿದ ಬೆನ್ನಲ್ಲೇ ಎದುರಾದ ಮೊದಲ ಅಗ್ನಿಪರೀಕ್ಷೆಯಲ್ಲಿ ಜೊಸೆಫ್ ವಿಜಯ್ ಪಾಸ್ ಆಗಿದ್ದಾರೆ. ಈ ಮೂಲಕ ವಿಜಯ್ ಸರ್ಕಾರ ಭದ್ರವಾಗಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಶ್ವಾಸ ಮತ ಯಾಚಿಸಿದ್ದರು. ಕಾಂಗ್ರೆಸ್ ಸೇರಿದಂತೆ ಹಲವು ಮೈತ್ರಿ ಪಕ್ಷಗಳು ಬೆಂಬಲ ಸೂಚಿಸಿತ್ತು. ಈ ವೇಳೆ ವಿಜಯ್ ಸರ್ಕಾರಕ್ಕೆ ಶಾಸಕು ಎದ್ದು ನಿಂತು ಬೆಂಬಲ ಸೂಚಿಸಿದರು. ವಿಧಾನಸಭೆಯಲ್ಲಿ ಹಾಜರಿದ್ದ ಶಾಸಕರ ಒಟ್ಟು ಮತಗಳ ಆಧರಿಸಿ ಬೆಂಬಲ ನಿರ್ಧಾರ ಮಾಡಲಾಯಿತು. ವಿಶೇಷ ಅಂದರೆ ವಿಜಯ್ ಸರ್ಕಾರಕ್ಕೆ 144 ಶಾಸಕರು ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಭರ್ಜರಿಯಾಗಿ ಮುಖ್ಯಮಂತ್ರಿ ವಿಜಯ್ ಸರ್ಕಾರ ವಿಶ್ವಾಸಮತ ಗೆದ್ದುಕೊಂಡಿದೆ.
ವಿಶ್ವಾಸ ಮತ ಗೆದ್ದ ನಟ ವಿಜಯ್ ಸರ್ಕಾರ 6 ತಿಂಗಳ ಕಾಲ ಸುರಕ್ಷಿತವಾಗಿದೆ. 6 ತಿಂಗಳ ಬಳಿಕ ಶಾಸಕರು ಇದೇ ಬೆಂಬಲ ಸೂಚಿಸಿದರೆ ವಿಜಯ್ ಸರ್ಕಾರ ಮತ್ತೆ ಸುರಕ್ಷಿತವಾಗಲಿದೆ. ಸದ್ಯ ಬೀಸೋ ದೊಣ್ಣೆಯಿಂದ ವಿಜಯ್ ಸರ್ಕಾರ ತಪ್ಪಿಸಿಕೊಂಡಿದೆ.
ಎಡಪ್ಪಾಡಿ ಕೆ ಪಳನಿಸ್ವಾಮಿ ಎಚ್ಚರಿಕೆ ನಡುವೆಯೂ ಎಐಎಡಿಎಂಕೆ ಎರಡು ಬಣಗಳ ಪೈಕಿ ಒಂದು ಬಣದ ಶಾಸಕರು ಬೆಂಬಲು ಸೂಚಿಸಿತ್ತು. ಹೀಗಾಗಿ ವಿಶ್ವಾಸ ಮತದ ವೇಳೆ ಟಿವಿಕೆ ಪಕ್ಷಕ್ಕೆ ಶಾಸಕರ ಬೆಂಬಲ 144ಕ್ಕೆ ಏರಿತ್ತು. ಕಾಂಗ್ರೆಸ್, ಸಿಪಿಐ, ವಿಸಿಕೆ, ಅಣ್ಣಾಡಿಎಂಕೆ ಸೇರಿದಂತೆ ಹಲವು ಪಕ್ಷಗಳ ಶಾಸಕರು ಬೆಂಬಲ ಸೂಚಿಸಿದ್ದಾರೆ. ಅಣ್ಣಾಡಿಎಂಕೆಯ 25 ಬಂಡಾಯ ಶಾಸಕರು ಬೆಂಬಲ ಸೂಚಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಐವರು ಶಾಸಕರು, ವಿಸಿಕೆ ಪಕ್ಷದ ಇಬ್ಬರು, ಸಿಪಿಐ ಪಕ್ಷ ತಲಾ ಇಬ್ಬರು ವಿಜಯ್ ಪರ ಮತ ಚಲಾಯಿಸಿದ್ದರು. ಇಂದು ವಿಧಾನಸಭೆ ಕಲಾಪಕ್ಕೆ ಐವರು ಶಾಸಕರು ಗೈರಾಗಿದ್ದರು. ಇತ್ತ ಇನ್ನು ಮುಖ್ಯಮಂತ್ರಿ ವಿಜಯ್ ವಿರುದ್ಧ 22 ಶಾಸಕರ ಮತ ಹಾಕಿದ್ದರು. ವಿಶ್ವಾಸ ಮತಯಾಚನೆ ಗೆದ್ದ ಬಳಿಕ ವಿಧಾನಸಭೆ ಮಾತನಾಡಿದ ಮುಖ್ಯಮಂತ್ರಿ ವಿಜಯ್, ನಮ್ಮ ಸರ್ಕಾರ ಯಾವುದೇ ತಾರತಮ್ಯ ಮಾಡುವುದಿಲ್ಲ. ಎಲ್ಲರ ವಿಶ್ವಾಸಗಳಿಸಿ ಆಡಳಿತ ನಡೆಸಲಿದೆ. ಮತ ಹಾಕಿ, ಸರ್ಕಾರವನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ತಮಿಳುನಾಡು ಜನರ ಸೇವೆಗಾಗಿ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಎಂದು ವಿಜಯ್ ಹೇಳಿದ್ದಾರೆ.







