ಸಮಗ್ರ ನ್ಯೂಸ್: ಪಂಚರಾಜ್ಯ ಚುನಾವಣೆ 2026ರಲ್ಲಿ ದಾಖಲೆಯ ಫಲಿತಾಂಶಗಳು ಹೊರಬಿದ್ದಿದ್ದು, ಪ್ರಪ್ರಥಮ ಬಾರಿಗೆ ಮೂರು ರಾಜ್ಯಗಳಲ್ಲಿ ದಶಕಗಳ ಕಾಲ ಮುಖ್ಯಮಂತ್ರಿಗಳಾಗಿ ಅಧಿಪತ್ಯ ಮೆರೆದ ರಾಜಕೀಯ ನಾಯಕರು ಇದೀಗ ಹೀನಾಯ ಸೋಲಿನ ಮೂಲಕ ಭಾರೀ ಮುಖಭಂಗ ಅನುಭವಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ದಾಖಲೆಯ ಮತಗಳು ಬಿದ್ದಾಗಲೇ ಹೊಸ ಅಧಿಕಾರದ ಮುನ್ಸೂಚನೆ ಇದು ಎಂಬುದು ಬಹುತೇಕರಿಗೆ ತಿಳಿಯಿತು. ಆದರೂ ಸಹ ಅಧಿಕೃತ ಫಲಿತಾಂಶ ಏನು ಹೇಳುತ್ತೆ ಎಂಬುದನ್ನು ಕಾದು ನೋಡಲು ತುದಿಗಾಲಿನಲ್ಲಿದ್ದರು. ಅಂತೆಯೇ, ಈಗ ಹೊರಬಿದ್ದಿರುವ ಪಂಚರಾಜ್ಯ ಚುನಾವಣೆಯಲ್ಲಿ ಹತ್ತತ್ತು ವರ್ಷಗಳ ಕಾಲ ಅಧಿಕಾರ ಮೆರೆದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಕೇರಳಂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಭಾರೀ ಅಂತರದ ಸೋಲು ಸಿಕ್ಕಿರುವುದು ಸದ್ಯ ಆಯಾ ರಾಜ್ಯಗಳಲ್ಲಿ ಹೊಸ ಅಧಿಕಾರದ ಮುನ್ಸೂಚನೆಯನ್ನು ನೀಡಿವೆ.
ವಿವರವಾಗಿ ತಿಳಿಯುವುದಾದರೆ, ಒಂದು ಪೂರ್ವದಲ್ಲಿದೆ ಮತ್ತು ಇನ್ನೆರಡು ದಕ್ಷಿಣದಲ್ಲಿದೆ. ಈ ಬಾರಿ, ಆಯಾ ನಾಯಕರು ವರ್ಷಗಳಲ್ಲಿ ನಿರ್ಮಿಸಿದ್ದ ಭದ್ರಕೋಟೆಗಳು ಚುನಾವಣೆಯಲ್ಲಿ ಕುಸಿದಿವೆ. ಇದು ಆಯಾ ಸರ್ಕಾರಗಳ ವಿರುದ್ಧ ಜನರಲ್ಲಿನ ವಿರೋಧವೇ ಎಂಬ ಬಲವಾದ ಸೂಚನೆಗಳು ಲಭಿಸಿವೆ. 15 ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ತನ್ನ ಭದ್ರಕೋಟೆಯಗೆ ಒಂದೇ ಒಂದು ಕಲ್ಲು ತಾಕದಂತೆ ನೋಡಿಕೊಂಡಿದ್ದ ಮಮತಾ ಕೋಟೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ.







