ವಾಣಿಜ್ಯ ಬಳಕೆ ಗ್ಯಾಸ್ ದರ ಭಾರೀ ಏರಿಕೆ| ಹೊಟೇಲ್ ಉದ್ಯಮಕ್ಕೆ ನೇರ ಹೊಡೆತ ನೀಡಿದ ಕೇಂದ್ರ ಸರ್ಕಾರ

ಸಮಗ್ರ ನ್ಯೂಸ್: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷದ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಇದರ ನೇರ ಹೊಡೆತ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಬಿದ್ದಿದೆ. ಶುಕ್ರವಾರ 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ ₹993 ಏರಿಕೆಯಾಗಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಿಗಳಿಗೆ ದೊಡ್ಡ ಆಘಾತ ನೀಡಿದೆ.

Ad Widget ... ..

ಹೊಸ ಪರಿಷ್ಕರಣೆಯ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈ ಹಿಂದಿನ ₹2,078.50 ರಿಂದ ₹3,071.50ಕ್ಕೆ ಏರಿಕೆಯಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲೇ ಒಟ್ಟಾರೆಯಾಗಿ ವಾಣಿಜ್ಯ ಗ್ಯಾಸ್ ದರದಲ್ಲಿ ₹1,303 ರಷ್ಟು ಏರಿಕೆಯಾದಂತಾಗಿದೆ.ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಗಗನಕ್ಕೇರಿದ್ದರೂ, ಗೃಹ ಬಳಕೆಯ (14.2 ಕೆ.ಜಿ) ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೆಹಲಿಯಲ್ಲಿ ಇದರ ಬೆಲೆ ₹913 ರಲ್ಲೇ ಮುಂದುವರಿದಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳೂ ಸದ್ಯಕ್ಕೆ ಸ್ಥಿರವಾಗಿವೆ.

Ad Widget

ತೈಲ ಮಾರಾಟ ಕಂಪನಿಗಳು ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿವೆ: ಮಾರ್ಚ್ 1: ₹114.5 ಏರಿಕೆ ಏಪ್ರಿಲ್ 1: ₹195.50 ಏರಿಕೆ ಮೇ 1 (ಇಂದು): ₹993 ಏರಿಕೆಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕ ಇಂಧನ ಪೂರೈಕೆ ಸರಪಳಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಸೇರಿದಂತೆ ವಿವಿಧ ಕಾರಣಗಳಿಂದ ಜಾಗತಿಕ ತೈಲ ಬೆಲೆಗಳು ಶೇ. 50ರಷ್ಟು ಹೆಚ್ಚಳವಾಗಿದ್ದು, ಇದು ಭಾರತದ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ.

Leave a Comment

Your email address will not be published. Required fields are marked *