ನಲವತ್ತರ ಮಹಿಳೆ ಜೊತೆ ಲವ್ ಗೆ ಬಿದ್ದ 21ರ ಯುವಕ| ಮನೆ ಬಿಟ್ಟು ಪರಾರಿಯಾದ ಜೋಡಿ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಒಂದು ವಿಚಿತ್ರ ಪ್ರೇಮ ಪ್ರಕರಣ ಬೆಳಕಿಗೆ ಬಂದಿದ್ದು, 21 ವರ್ಷದ ಯುವಕನೊಬ್ಬ ತನಗಿಂತ 19 ವರ್ಷ ದೊಡ್ಡವಳಾದ ಮಹಿಳೆಯನ್ನು ಪ್ರೀತಿಸಿ ಮದುವೆಯಾಗುವ ಮೂಲಕ ಎರಡೂ ಕುಟುಂಬಗಳಿಗೆ ಆಘಾತ ನೀಡಿದ್ದಾನೆ.

Ad Widget ... .. Ad Widget .

ಸಾಮಾಜಿಕ ಜಾಲತಾಣದಲ್ಲಿ ಶುರುವಾದ ಇವರ ಪರಿಚಯವು ಮನೆಯವರು ಒಪ್ಪದಿದ್ದರೂ ದೇವಸ್ಥಾನದಲ್ಲಿ ರಹಸ್ಯ ವಿವಾಹವಾಗುವ ಮಟ್ಟಕ್ಕೆ ತಲುಪಿದೆ.

Ad Widget

ಹಿಂದಿನ ಕಾಲದಲ್ಲಿ ಗಂಡನಿಗಿಂತ ಹೆಂಡತಿ ವಯಸ್ಸಿನಲ್ಲಿ ಚಿಕ್ಕವಳಿರಬೇಕು ಎಂಬ ಸಂಪ್ರದಾಯವಿತ್ತು. ಆದರೆ ಅಮ್ರೋಹಾದ ಈ ಯುವಕ ಮಾತ್ರ ಆಗ್ರಾದ 40 ವರ್ಷದ ವಿಧವೆ ಮಹಿಳೆಯ ಪ್ರೇಮಪಾಶಕ್ಕೆ ಬಿದ್ದಿದ್ದಾನೆ. ಮಗ ಹಠಾತ್ತನೆ ನಾಪತ್ತೆಯಾದಾಗ ಆತಂಕಗೊಂಡ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ತನಿಖೆ ನಡೆಸಿದಾಗ ಯುವಕ ಆಗ್ರಾದಲ್ಲಿ ಆ ಮಹಿಳೆಯ ಜೊತೆ ಇರುವುದು ಪತ್ತೆಯಾಗಿದೆ. ಮಗನನ್ನು ಹುಡುಕಿಕೊಂಡು ಆಕೆಯ ಮನೆಗೆ ತಾಯಿ ಹೋದಾಗ ಅಲ್ಲಿ ದೊಡ್ಡ ಗದ್ದಲವೇ ನಡೆದಿದೆ. ಮನೆಯವರಿಗೆ ತಿಳಿಸದೆ ಇವರಿಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದು, ಈಗ ಜೊತೆಯಾಗಿ ಬದುಕುತ್ತಿರುವುದು ಬೆಳಕಿಗೆ ಬಂದಿದೆ.

Leave a Comment

Your email address will not be published. Required fields are marked *