ಸಮಗ್ರ ನ್ಯೂಸ್: ಪರೀಕ್ಷೆ ಇನ್ನಿತರ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತೊಂದರೆ ಆಗದಂತೆ ರಾಜ್ಯ ಸಾರಿಗೆ ವಾಹನಗಳು ಉಚಿತ ಪ್ರಯಾಣ ನೀಡುತ್ತಿವೆ. ಇದೀಗ ಅಗತ್ಯತೆ ಆಧಾರದಲ್ಲಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) 1 ರಿಂದ 9ನೇ ತರಗತಿ ಮಕ್ಕಳಿಗೆ ಖುಷಿ ಸುದ್ದಿ ನೀಡಿದೆ.
2025-26ನೇ ಸಾಲಿನ 01 ರಿಂದ 09ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿಗಳು ಏಪ್ರಿಲ್ 10ರವರೆಗೂ ನಡೆಯಲಿವೆ. ದಿನಪತ್ರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಿರುವ ಬಸ್ ಪಾಸ್ ಅವಧಿಯು ಮಾಚ್ 31ರಂದು ಮುಕ್ತಾಯಗೊಳ್ಳಲಿದೆ. ಶೈಕ್ಷಣಿಕ ತರಗತಿಗಳು ಇನ್ನೂ ಹತ್ತು ದಿನ ಇರುವ ಪ್ರಯುಕ್ತ ವಿದ್ಯಾರ್ಥಿ ಬಸ್ ಪಾಸ್ ಅವಧಿಯನ್ನು ವಿಸ್ತರಿಸುವಂತೆ ಕೋರಲಾಗಿತ್ತು. ಆ ಮನವಿಯನ್ನು ಸಾರಿಗೆ ಸಂಸ್ತೆ ಪರಿಶೀಲಿಸಲಾಗಿದೆ.
ಈ ಸಂಬಂಧ ಉಲ್ಲೇಖ-2 ರ ಸೂಕ್ತಾಧಿಕಾರಿಗಳ ಆದೇಶದಂತೆ ಮಾರ್ಚ್ 31ರಂದು ಮುಕ್ತಾಯಗೊಂಡ 01 ರಿಂದ 09ನೇ ತರಗತಿ ವಿದ್ಯಾರ್ಥಿಗಳ ವಿದ್ಯಾರ್ಥಿ ಬಸ್ ಪಾಸ್ ಮಾನ್ಯತಾ ಅವಧಿಯನ್ನು ಮುಂದಿನ ಏಪ್ರಿಲ್ 10ರವರೆಗೆ ವಿಸ್ತರಣೆ ಮಾಡಿ ಹೆಚ್ಚುವರಿ ದಿನಗಳ ಕಾಲ ವಿದ್ಯಾರ್ಥಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.







