ಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ| ಇತಿಹಾಸದಲ್ಲೇ ಮೊದಲ ಬಾರಿಗೆ 95ಕ್ಕೆ ಕುಸಿದ ಭಾರತೀಯ ಕರೆನ್ಸಿ

ಸಮಗ್ರ ನ್ಯೂಸ್: ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ತೀವ್ರ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಸೋಮವಾರ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು 95ರ ಗಡಿ ದಾಟಿದೆ.

. Ad Widget . Ad Widget . Ad Widget .

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಲ್ಲಾ ಬ್ಯಾಂಕುಗಳು ರಾತ್ರಿಯಿಡೀ ಇರಿಸಬಹುದಾದ ನಿವ್ವಳ ಆರಂಭಿಕ ಸ್ಥಾನ, NOP-INR ಗರಿಷ್ಠ 100 ಮಿಲಿಯನ್ ಡಾಲರ್‌ಗೆ ಮಿತಿಗೊಳಿಸಬೇಕು ಎಂದು ನಿರ್ದೇಶನ ನೀಡಿತ್ತು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಪರಿಣಾಮ ಇಂದು ರೂಪಾಯಿ ಮೌಲ್ಯ ಬೆಳಗ್ಗೆ ಸುಮಾರು 1 ರೂಪಾಯಿ 30 ಪೈಸೆ ಏರಿಕೆಯಾಗಿ 93.59 ಕ್ಕೆ ತಲುಪಿತ್ತು. ಬೆಳಗ್ಗೆ ಏರಿಕೆಯಾಗಿದ್ದರೆ ನಂತರ ರೂಪಾಯಿ ಮೌಲ್ಯ ಕುಸಿಯಲು ಆರಂಭವಾಯಿತು.

ಮಧ್ಯಾಹ್ನ 3 ಗಂಟೆಯ ವೇಳೆಗೆ ಪ್ರತಿ ಡಾಲರ್‌ ಗೆ 95.13 ರೂ.ನಲ್ಲಿ ವ್ಯವಹಾರ ನಡೆಸುತ್ತಿತ್ತು. ಡಾಲರ್‌ ಮುಂದೆ ರೂಪಾಯಿ ಮೌಲ್ಯ 95 ಡಾಲರ್‌ಗೆ ಕುಸಿದಿರುವುದು ಇದೇ ಮೊದಲು.

ಈ ಭಾರಿ ಕುಸಿತಕ್ಕೆ ಪ್ರಮುಖವಾಗಿ ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಸತತವಾಗಿ ಹಣವನ್ನು ಹಿಂತೆಗೆದುಕೊಳ್ಳುತ್ತಿರುವುದು (FPI Outflow) ಪ್ರಮುಖ ಕಾರಣವಾಗಿದೆ. ಇದರೊಂದಿಗೆ ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವುದು ಭಾರತದ ಆಮದು ವೆಚ್ಚವನ್ನು ದುಬಾರಿಯಾಗಿಸಿದೆ. ರೂಪಾಯಿ ಮೌಲ್ಯದ ಇಳಿಕೆ ಮತ್ತು ಆಮದು ವೆಚ್ಚದ ಏರಿಕೆಯ ‘ಡಬಲ್ ಎಫೆಕ್ಟ್’ನಿಂದಾಗಿ ಭಾರತದ ವಿದೇಶಿ ವಿನಿಮಯ ಮಾರುಕಟ್ಟೆಯ ಮೇಲೆ ಭಾರಿ ಒತ್ತಡ ಉಂಟಾಗಿದೆ.

Leave a Comment

Your email address will not be published. Required fields are marked *