ಉಪ್ಪಿನಂಗಡಿ: ಅಕ್ರಮ ದಾಸ್ತಾನು ಮಾಡಿದ್ದ 4 ಸಾವಿರ ಲೀಟರ್ ಡೀಸೆಲ್ ಜಪ್ತಿ

ಸಮಗ್ರ ನ್ಯೂಸ್: ಅಕ್ರಮವಾಗಿ ದಾಸ್ತಾನು ಮಾಡಿದ್ದ 4,175 ಲೀಟರ್‌ ಡಿಸೇಲ್ ಅನ್ನು ಬೆಳ್ತಂಗಡಿ ಡಿವೈಎಸ್ಪಿ. ರೋಹಿಣಿ ಸಿ.ಕೆ. ನೇತೃತ್ವದ ತಂಡ ಜಪ್ತಿ ಮಾಡಿದೆ. ಬೆಳ್ತಂಗಡಿ ತಾಲ್ಲೂಕಿನ ಕಣಿಯೂರು ಗ್ರಾಮದ ಜಗದೀಶ್ ಎಂಬಾತ ಶೆಡ್‌ನಲ್ಲಿ ಅಕ್ರಮವಾಗಿ ಡೀಸೆಲ್ ದಾಸ್ತಾನು ಮಾಡಿದ್ದ.

. Ad Widget . Ad Widget . Ad Widget .

ಪೊಲೀಸರು ದಾಳಿ ನಡೆಸಿ 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್‌ಗಳು ಹಾಗೂ 35 ಲೀಟರ್ ಸಾಮರ್ಥ್ಯ 5 ಕ್ಯಾನ್‌ಗಳಲ್ಲಿ ಒಟ್ಟು 4,175 ಲೀಟರ್‌ ಡೀಸೆಲ್ ಜಪ್ತಿ ಮಾಡಿದರು. ಇವುಗಳ ಮೌಲ್ಯ ₹3.50 ಲಕ್ಷ ಎಂದು ಅಂದಾಜಿಸಲಾಗಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *