ಚೆನ್ನರಾಯಪಟ್ಣ: ರೈಲಿನಿಂದ ಬಿದ್ದು ವಿಟ್ಲ ಮೂಲದ ಯುವಕ ಸಾವು

ಸಮಗ್ರ ನ್ಯೂಸ್: ಚಲಿಸುವ ರೈಲಿನಿಂದ ಬಿದ್ದು ಪುತ್ತೂರು ಮೂಲದ ಯುವಕನೊಬ್ಬ ಸಾವನಪ್ಪಿದ ಘಟನೆ ಚೆನ್ನರಾಯಪಟ್ಟಣದ ಬಳಿ ನಡೆದಿದೆ. ಮೃತರನ್ನು ಪುಣಚ ಗ್ರಾಮದ ದೇವಿನಗರ ನಿವಾಸಿ ನಿಶಿತ್ ನಾಯ್ಕ್ (25) ಮೃತಪಟ್ಟವರು ಎಂದು ಗುರುತಿಸಲಾಗಿದೆ.

Ad Widget . Ad Widget . Ad Widget . Ad Widget . Ad Widget .

ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್’ನಲ್ಲಿ ಉದ್ಯೋಗಿಯಾಗಿರುವ ನಿಶಿತ್ ಅವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ. ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರನಾಗಿಯೂ ಗುರುತಿಸಿಕೊಂಡಿದ್ದರು.
ಮನೆಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ಟ್ರೈನ್ ಹಿಡಿದಿದ್ದರು. ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅವರು, ಸುಮಾರು 2.30ರ ಹೊತ್ತಿಗೆ ರೈಲಿನಿಂದ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *