October 2025

ಹಬ್ಬಗಳ ಸೀಸನ್ ನಲ್ಲಿ ಭಾರೀ ಬೇಡಿಕೆ ಕಂಡ ನಂದಿನಿ ಉತ್ಪನ್ನಗಳು| ಮಾರಾಟದಲ್ಲಿ ದಾಖಲೆ ಬರೆದ ಕೆಎಂಎಫ್

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಕೆಎಂಎಫ್‌ ಉತ್ಪನ್ನಗಳಿಗೆ ಭಾರೀ ಬೇಡಿಕೆ ಬಂದಿದೆ. ಕರ್ನಾಟಕ ಹಾಲು ಮಹಾಮಂಡಳಿ (KMF) ಈ ವರ್ಷ ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ತನ್ನ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಈ ಸೀಸನ್ ನಲ್ಲಿ 1100 ಟನ್ ಸಿಹಿತಿಂಡಿಗಳನ್ನು ಮಾರಾಟ ಮಾಡುವ ಮೂಲಕ 46 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ. ಇದು ಕೆಎಂಎಫ್ ಇತಿಹಾಸದಲ್ಲೇ ಹೊಸ ದಾಖಲೆ ಎಂದು ಹೇಳಲಾಗಿದೆ. ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಪ್ರತಿ ವರ್ಷ […]

ಹಬ್ಬಗಳ ಸೀಸನ್ ನಲ್ಲಿ ಭಾರೀ ಬೇಡಿಕೆ ಕಂಡ ನಂದಿನಿ ಉತ್ಪನ್ನಗಳು| ಮಾರಾಟದಲ್ಲಿ ದಾಖಲೆ ಬರೆದ ಕೆಎಂಎಫ್ Read More »

ಆಂಧ್ರಪ್ರದೇಶದಲ್ಲಿ ಭೀಕರ ದುರಂತ| ಚಲಿಸುತ್ತಿದ್ದ ವೋಲ್ವೊ ಬಸ್ ಬೆಂಕಿಗಾಹುತಿಯಾಗಿ 22 ಮಂದಿ ಸಜೀವ ದಹನ

ಸಮಗ್ರ ನ್ಯೂಸ್: ಆಂಧ್ರಪದೇಶದ ಕರ್ನೂಲ್ ಜಿಲ್ಲೆಯಲ್ಲಿ ರಸ್ತೆಯಲ್ಲೇ ಖಾಸಗಿ ಬಸ್ ಹೊತ್ತಿ ಉರಿದು 22 ಮಂದಿ ಸಜೀವ ದಹನವಾಗಿದ್ದು, ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ ಆಗಿದೆ. ಇಲ್ಲಿಯವರೆಗೆ 22 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ 11 ಶವಗಳನ್ನು ಹೊರತೆಗೆಯಲಾಗಿದೆ ಮತ್ತು ಇನ್ನೂ ಕೆಲವರನ್ನು ಗುರುತಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಸಿರಿ ಹೇಳುತ್ತಾರೆ. ಇದರಿಂದಾಗಿ, ಪ್ರಯಾಣಿಕರ ಸಂಬಂಧಿಕರು ಎಲ್ಲಿದ್ದಾರೆಂದು ತಿಳಿಯದೆ ಆತಂಕಗೊಂಡಿದ್ದಾರೆ. ಹೈದರಾಬಾದ್ನಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಮುರಿ ಕಾವೇರಿ ಟ್ರಾವೆಲ್ಸ್ಗೆ ಸೇರಿದ ವೋಲ್ವೋ ಬಸ್ ಗುರುವಾರ ಮಧ್ಯರಾತ್ರಿಯ

ಆಂಧ್ರಪ್ರದೇಶದಲ್ಲಿ ಭೀಕರ ದುರಂತ| ಚಲಿಸುತ್ತಿದ್ದ ವೋಲ್ವೊ ಬಸ್ ಬೆಂಕಿಗಾಹುತಿಯಾಗಿ 22 ಮಂದಿ ಸಜೀವ ದಹನ Read More »

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ| ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದ ಚೀನಿವಾರಪೇಟೆ

ಸಮಗ್ರ ನ್ಯೂಸ್: ಚಿನ್ನದ ಬೆಲೆಯ (gold rate) ಏರಿಳಿಕೆ ಆಟ ನಡೆಯುತ್ತಿದೆ. ಹಳದಿ ಲೋಹದ ಬೆಲೆ ಗ್ರಾಮ್​ಗೆ 500ಕ್ಕೂ ಹೆಚ್ಚು ರೂಗಳಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಂತೂ ಭರ್ಜರಿ ಇಳಿಕೆ ಮುಂದುವರಿಸಿದೆ. ಇಂದು ಅದರ ಬೆಲೆ ಗ್ರಾಮ್​ಗೆ ಬರೋಬ್ಬರಿ 8 ರೂಗಳಷ್ಟು ಕಡಿಮೆ ಆಗಿದೆ. 162 ರೂಗೆ ಬೆಲೆ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,16,600 ರುಪಾಯಿ ಇದೆ.

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ| ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದ ಚೀನಿವಾರಪೇಟೆ Read More »

ಶಬರಿಮಲೆ‌ಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಸಮಗ್ರ ನ್ಯೂಸ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಸಾಂಪ್ರದಾಯಿಕ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತಲೆ ಮೇಲೆ ಇರುಮುಡಿ ಹೊತ್ತು, ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಮಹಿಳಾ ರಾಷ್ಟ್ರಪತಿಯಾಗಿ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿದ ಮೊದಲಿಗರು ಎಂದು ಮುರ್ಮು ದಾಖಲೆ ಬರೆದಿದ್ದಾರೆ. ಅಲ್ಲದೆ ಅಯ್ಯಪ್ಪ ಸನ್ನಿಧಿಗೆ ಭೇಟಿ ನೀಡಿದ ಭಾರತದ ಎರಡನೇ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ. ಇಂದು

ಶಬರಿಮಲೆ‌ಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು Read More »

ಬೆಂಗಳೂರಿನ ಲಾಡ್ಜ್ ನಲ್ಲಿ‌ ಸಾವನ್ನಪ್ಪಿದ ಪುತ್ತೂರಿನ ಯುವಕನ ಪ್ರಕರಣಕ್ಕೆ ರೋಚಕ ತಿರುವು| ಪೋಸ್ಟ್ ಮಾರ್ಟಂ ವರದಿಯಲ್ಲೇನಿದೆ ಗೊತ್ತಾ?

ಸಮಗ್ರ ನ್ಯೂಸ್: ಬೆಂಗಳೂರಿನ ಲಾಡ್ಜ್‌ನಲ್ಲಿ ಪುತ್ತೂರು ಮೂಲದ ತಕ್ಷಿತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪ್ರಕರಣ ಹೊಸ ತಿರುವು ಪಡೆದಿದೆ. ಮರಣೋತ್ತರ ಪರೀಕ್ಷೆಯ ವರದಿ ಮಡಿವಾಳ ಠಾಣೆಯ ಪೊಲೀಸರ ಕೈ ಸೇರಿದೆ. ಪುತ್ತೂರು ಮೂಲದ ತಕ್ಷಿತ್ ಸಾವಿನ ಪ್ರಕರಣ ಹೊಸ ಆಯಾಮ ಪಡೆದುಕೊಂಡಿದೆ. ಬೆಂಗಳೂರು ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಮೃತನಾಗಿದ್ದ ತಕ್ಷಿತ್ ಮರಣೋತ್ತರ ಶವ ಪರೀಕ್ಷೆಯ ವರದಿ ಪೊಲೀಸರ ಕೈಗೆ ಸೇರಿದೆ. ವರದಿಯ ಕೆಲವೊಂದು ಅಂಶಗಳು ಲಭ್ಯವಾಗಿದೆ. ತಕ್ಷಿತ್ ಮತ್ತು ಯುವತಿ ಸುಮಾರು 20 ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದರು. ಪದೇ

ಬೆಂಗಳೂರಿನ ಲಾಡ್ಜ್ ನಲ್ಲಿ‌ ಸಾವನ್ನಪ್ಪಿದ ಪುತ್ತೂರಿನ ಯುವಕನ ಪ್ರಕರಣಕ್ಕೆ ರೋಚಕ ತಿರುವು| ಪೋಸ್ಟ್ ಮಾರ್ಟಂ ವರದಿಯಲ್ಲೇನಿದೆ ಗೊತ್ತಾ? Read More »

ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದಲ್ಲಿ ಜನ ಅಸ್ವಸ್ಥಗೊಂಡ ಪ್ರಕರಣ| ಜನತೆಯ ಕ್ಷಮೆ ಕೋರಿದ ಶಾಸಕ ಅಶೋಕ್ ರೈ

ಸಮಗ್ರ ನ್ಯೂಸ್: ಸೋಮವಾರ ಪುತ್ತೂರಿನ ಕೊಂಬೆಟ್ಟು ಕಾಲೇಜು ಬಳಿಯ ಮೈದಾನದಲ್ಲಿ ನಡೆದ ಅಶೋಕ ಜನಮನ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಜನಸ್ತೋಮದ ನಡುವೆ ಸಿಲುಕಿ‌ ಕೆಲವರು ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿ ಶಾಸಕ ಅಶೋಕ್ ರೈ ಕ್ಷಮೆ ಕೋರಿದ್ದಾರೆ. ‘ನಿರೀಕ್ಷಿಸಿದಕ್ಕಿಂತ ಹೆಚ್ಚು ಜನರು ಕಾರ್ಯಕ್ರಮಕ್ಕೆ ಬಂದಿದ್ದರು.‌ ಮಧ್ಯಾಹ್ನ ಮಳೆಯೂ ಬಂತು. ಹೀಗಾಗಿ ಜನಸ್ತೋಮದಲ್ಲಿ ಸಿಲುಕಿ ಕೆಲವು ಮಂದಿ ಅಸ್ವಸ್ಥರಾದರು. ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಎಲ್ಲ ಬಗೆಯ ವ್ಯವಸ್ಥೆ ಮಾಡಿದ್ದರೂ ಜನಸಂದಣಿಯಿಂದಾಗಿ ವ್ಯತ್ಯಯ

ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದಲ್ಲಿ ಜನ ಅಸ್ವಸ್ಥಗೊಂಡ ಪ್ರಕರಣ| ಜನತೆಯ ಕ್ಷಮೆ ಕೋರಿದ ಶಾಸಕ ಅಶೋಕ್ ರೈ Read More »

ಮಂಗಳೂರು: ವೈದ್ಯರಿಂದ ಸತ್ತಿದ್ದಾನೆಂದು ಘೋಷಿಸಲ್ಪಟ್ಟ ವ್ಯಕ್ತಿ ಚಿತೆಯಲ್ಲಿ ಎದ್ದ!! ಕುಟುಂಬಕ್ಕೆ ಶಾಕ್ ಜೊತೆಗೆ ಸಂತಸ

ಸಮಗ್ರ ನ್ಯೂಸ್: ಮಂಗಳೂರಿನ ದೇರಳಕಟ್ಟೆಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬರು, ಅಂತ್ಯಸಂಸ್ಕಾರದ ಕಟ್ಟಿಗೆಯ ಮೇಲೆ ಇಡಬೇಕೆನ್ನುವಷ್ಟರಲ್ಲಿ ಜೀವಂತವಾಗಿದ್ದು, ಕುಟುಂಬಕ್ಕೆ ಶಾಕ್ ಮತ್ತು ಸಂತಸವನ್ನು ನೀಡಿದ ವಿಚಿತ್ರ ಘಟನೆ ನಡೆದಿದೆ. ಏನಿದು ಘಟನೆ?ಅಕ್ಟೋಬರ್ 16 ರಂದು ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದ ೬೯ ವರ್ಷದ ರಘುನಾಥ ಗಟ್ಟಿ ಅವರಿಗೆ, ಅಕ್ಟೋಬರ್ 19 ರ ಸಂಜೆ ವೈದ್ಯರು ‘ಮೃತರಾಗಿದ್ದಾರೆ’ ಎಂದು ಘೋಷಿಸಿದರು. ಕುಟುಂಬಸ್ಥರು ಮರುದಿನ ಬೆಳಿಗ್ಗೆ ಮೃತದೇಹವನ್ನು ತೆಗೆದುಕೊಂಡು ಹೋಗುವುದಾಗಿ ತಿಳಿಸಿದ ಬಳಿಕ, ಆಸ್ಪತ್ರೆಯ ಸಿಬ್ಬಂದಿ ರಘುನಾಥ್

ಮಂಗಳೂರು: ವೈದ್ಯರಿಂದ ಸತ್ತಿದ್ದಾನೆಂದು ಘೋಷಿಸಲ್ಪಟ್ಟ ವ್ಯಕ್ತಿ ಚಿತೆಯಲ್ಲಿ ಎದ್ದ!! ಕುಟುಂಬಕ್ಕೆ ಶಾಕ್ ಜೊತೆಗೆ ಸಂತಸ Read More »

ಪುತ್ತೂರು: ಅಕ್ರಮ‌ ಗೋಸಾಗಾಟ ಮಾಡುತ್ತಿದ್ದವರಿಗೆ ಪೊಲೀಸರಿಂದ ಗುಂಡೇಟು| ಗೋಪೂಜೆ ದಿನದಂದು ಸಿಕ್ಕಿಬಿದ್ದ ಗೋಕಳ್ಳರು

ಸಮಗ್ರ ನ್ಯೂಸ್: ಅಕ್ರಮ ಗೋಸಾಗಾಟ ನಡೆಸುತ್ತಿದ್ದ ತಂಡಕ್ಕೆ ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಬೆಳ್ಳಿಚಡವು ಎಂಬಲ್ಲಿ ನಸುಕಿನ ಜಾವ ಪೊಲೀಸರು ಶಾಕ್‌ ನೀಡಿದ್ದಾರೆ. ಅನಧಿಕೃತ ಗೋ ಸಾಗಾಟಗಾರರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದು ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ಆರೋಪಿಯನ್ನು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ. ಈತ ಕೇರಳದ ಕಾಸರಗೋಡು ನಿವಾಸಿ ಅಬ್ದುಲ್ಲಾ (40 ವರ್ಷ), ಎಂದು ಗುರುತಿಸಲಾಗಿದೆ. ಘಟನೆಯ ವಿವರ:ಮೂಲಗಳ ಪ್ರಕಾರ ಗೋವುಗಳನ್ನು ಅನಧಿಕೃತವಾಗಿ

ಪುತ್ತೂರು: ಅಕ್ರಮ‌ ಗೋಸಾಗಾಟ ಮಾಡುತ್ತಿದ್ದವರಿಗೆ ಪೊಲೀಸರಿಂದ ಗುಂಡೇಟು| ಗೋಪೂಜೆ ದಿನದಂದು ಸಿಕ್ಕಿಬಿದ್ದ ಗೋಕಳ್ಳರು Read More »

ರಾಜ್ಯದ ಎಲ್ಲಾ ಮುಜುರಾಯಿ ದೇವಾಲಯಗಳಲ್ಲಿ ನಾಳೆ(ಅ.22) ಗೋಪೂಜೆ ಕಡ್ಡಾಯಗೊಳಿಸಿ‌ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ದೀಪಾವಳಿ ಅಂದರೆ ಬಲಿಪಾಡ್ಯಮಿಯ ನಾಳೆಯಂದು ಗೋಪೂಜೆ ಕಾರ್ಯಕ್ರಮ ನೆರವೇರಿಸುವಂತೆ ಸರ್ಕಾರ ಅಧಿಕೃತ ಆದೇಶ ಮಾಡಿದೆ. ಈ ಕುರಿತಂತೆ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ದೀಪಾವಳಿ (ಬಲಿಪಾಡ್ಯಮಿ) ದಿನದಂದು ಗೋಪೂಜೆ ಕಾರ್ಯಕ್ರಮ ಆಚರಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು, ಕರ್ನಾಟಕ ಸರ್ಕಾರ ರವರ ಮೌಖಿಕ ನಿರ್ದೇಶನ ನೀಡಿದ್ದಾರೆ

ರಾಜ್ಯದ ಎಲ್ಲಾ ಮುಜುರಾಯಿ ದೇವಾಲಯಗಳಲ್ಲಿ ನಾಳೆ(ಅ.22) ಗೋಪೂಜೆ ಕಡ್ಡಾಯಗೊಳಿಸಿ‌ ಸರ್ಕಾರ ಆದೇಶ Read More »

ಸುಳ್ಯ: ಹೈಪರ್ ಐಜಿಇ ಕಾಯಿಲೆಯಿಂದ ಬಳಲುತ್ತಿದ್ದ ಚಾಂದಿನಿ ನಿಧನ

ವಿರಳ ಹಾಗೂ ತೀರ ಅಪರೂಪದ ಖಾಯಿಲೆ Hyper IGE Mediated Mast cell activation syndromeನಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಗಾಂಧಿನಗರ ನಿವಾಸಿ ಚಾಂದಿನಿ ಕೊನೆಗೂ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಚಾಂದಿನಿ ಈ ಕಾಯಿಲೆಯಿಂದ ಬಳಲುತ್ತಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು. ಇವರಿಗಿದ್ದ ಕಾಯಿಲೆ ಏನು ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಗೆ ಬಹಳ ಸಮಯ ಹಿಡಿದಿತ್ತು. ಅಂತಿಮವಾಗಿ ಇವರಿಗೆ ಇದ್ದಿದ್ದು ಬಹಳ ಅಪರೂಪದ ಕಾಯಿಲೆ ಎಂದು ಗೊತ್ತಾಗಿ, ಅದಕ್ಕೆ ಚಿಕಿತ್ಸೆ

ಸುಳ್ಯ: ಹೈಪರ್ ಐಜಿಇ ಕಾಯಿಲೆಯಿಂದ ಬಳಲುತ್ತಿದ್ದ ಚಾಂದಿನಿ ನಿಧನ Read More »