ರಾಜ್ಯದಲ್ಲಿ ಗಣೇಶ ಚತುರ್ಥಿ ವೇಳೆ ಡಿಜೆ ಬಳಕೆ ನಿಷೇಧಿಸಿಲ್ಲ, ನಿಯಮಾನುಸಾರ ಬಳಕೆ – ಸಚಿವ ತಂಗಡಗಿ

ಸಮಗ್ರ ನ್ಯೂಸ್: ಗಣೇಶ ಹಬ್ಬದ ವೇಳೆ ಡಿಜೆ ಬಳಕೆ ಕುರಿತು ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆಸಲಾಗುವುದು. ಈ ವಿಷಯದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ. ಆದರೆ ಡಿಜೆ ನಿಷೇಧ ಮಾಡಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ.

Ad Widget ... .. Ad Widget .

ಕೊಪ್ಪಳದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡಿಜೆ ನಿಷೇಧ ಎನ್ನುವ ಬಿಜೆಪಿಯ ಮಾತು ಕೇಳಬೇಡಿ. ಡಿಜೆ ಬಳಕೆಗೆ ಕೋರ್ಟ್ ಮಾರ್ಗಸೂಚಿಯ ಪ್ರಕಾರ ಇಂತಿಷ್ಟು ಡೆಸಿಬಲ್ ಇರಬೇಕು ಎನ್ನುವ ನಿಯಮವಿದೆ. ಆ ಪ್ರಕಾರ ನೋಡಿಕೊಳ್ಳಬೇಕು. ಯುವಕರಿಗೆ 18ನೇ ವರ್ಷಕ್ಕೆ ಮತದಾನದ ಹಕ್ಕು ನೀಡಿದ್ದು ನಮ್ಮ ಕಾಂಗ್ರೆಸ್. ಹೀಗಿರುವಾಗ ನಾವು ಯುವಕರಿಗೆ ಹೇಗೆ ಡಿಜೆ ಬಳಕೆಗೆ ನಿಷೇಧ ಹೇರಲು ಸಾಧ್ಯವೇ ಎಂದು ಹೇಳಿದ್ದಾರೆ.

Ad Widget

Leave a Comment

Your email address will not be published. Required fields are marked *